ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮೋಸ್ಟ್ ವಾಂಟೆಡ್ ಆರೋಪಿ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್‌ಗೆ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ರೆಡ್ ಕಾರ್ಪೆಟ್ ಸ್ವಾಗತ ನೀಡಲು ಸಜ್ಜಾಗಿದೆ.
ಝಾಕಿರ್ ನಾಯ್ಕ್ ಭಯೋತ್ಪಾದನೆಗೆ ಪ್ರಚೋದನೆ, ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತು 2016ರಿಂದ ಭಾರತ ತೊರೆದು ಮಲೇಷ್ಯಾದಲ್ಲಿ ವಾಸವಾಗಿದ್ದು, ಇದೀಗ ಯೂನಸ್ ನೇತೃತ್ವದ ಆಡಳಿತವು ನಾಯ್ಕ್‌ಗಾಗಿ ಒಂದು ತಿಂಗಳ ಕಾಲ ರಾಷ್ಟ್ರವ್ಯಾಪಿ ಪ್ರವಾಸಕ್ಕೆ ಅನುಮೋದನೆ ನೀಡಿದೆ.
ಕಾರ್ಯಕ್ರಮ ಆಯೋಜಕರ ಪ್ರಕಾರ, ನವೆಂಬರ್ 28 ರಿಂದ ಡಿಸೆಂಬರ್ 20, 2025 ರವರೆಗೆ ನಿಗದಿಯಾಗಿರುವ ಈ ಪ್ರವಾಸವನ್ನು ಸರ್ಕಾರ ಅಧಿಕೃತವಾಗಿ ಅನುಮೋದಿಸಿದೆ ಮತ್ತು ಅಧಿಕಾರಿಗಳು ಇದಕ್ಕೆ ಅನುಕೂಲ ಮಾಡಿಕೊಡುತ್ತಿದ್ದಾರೆ.
ಜುಲೈ 2016 ರ ಢಾಕಾ ಹೋಲೆ ಆರ್ಟಿಸನ್ ಬೇಕರಿ ಭಯೋತ್ಪಾದಕ ದಾಳಿಯ ನಂತರ ಝಾಕಿರ್ ನಾಯ್ಕ್ ಒಡೆತನದ ಪೀಸ್ ಟಿವಿಯನ್ನು ಈ ಹಿಂದಿನ ಶೇಖ್ ಹಸೀನಾ ನೇತೃತ್ವದ ಸರ್ಕಾರ ನಿಷೇಧಗೊಳಿಸಿತ್ತು. ಇದೀಗ ಯೂನಸ್ ಸರ್ಕಾರ ಝಾಕಿರ್ ನಾಯ್ಕ್‌ಗೆ ಮಾನ್ಯತೆ ನೀಡಿದೆ.

