ಬೆಳ್ಳುಳ್ಳಿಯ ಸುವಾಸನೆ, ರುಚಿ ಅಡುಗೆಗೆ ತಂದುಕೊಡುವ ಗಮ್ಮತ್ತೇ ಬೇರೆ. ಆದರೆ ಸಿಪ್ಪೆ ತೆಗೆಯೋ ಕೆಲಸ ಮಾತ್ರ ಅನೇಕರಿಗೆ ತಲೆನೋವು. ಸಣ್ಣ ಎಸಳುಗಳು, ಕೈಗೆ ಬರುವ ವಾಸನೆ, ಉಗುರು ಹಾಳಾಗೋದು ಇವೆಲ್ಲದರಿಂದ ಕೆಲವರು ಬೆಳ್ಳುಳ್ಳಿ ಬಳಸೋದನ್ನೇ ಬಿಟ್ಟುಬಿಡ್ತಾರೆ. ಆದರೆ ಚಿಂತೆ ಬೇಡ! ಬೆಳ್ಳುಳ್ಳಿ ಸಿಪ್ಪೆ ತೆಗೆಯೋದು ಈಗ ಅಷ್ಟು ಕಷ್ಟವಲ್ಲ. ಇಲ್ಲಿವೆ ಕೆಲವು ಸುಲಭ ಟ್ರಿಕ್ಸ್ ನಿಮಗೆ ಸಮಯ ಉಳಿಸುತ್ತವೆ, ಕೈ ವಾಸನೆಯೂ ಬರುವುದಿಲ್ಲ.
- ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿ: ಬೆಳ್ಳುಳ್ಳಿ ಎಸಳುಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ 10–15 ನಿಮಿಷ ನೆನೆಸಿಡಿ. ಇದರಿಂದ ಸಿಪ್ಪೆ ಮೃದುಗೊಂಡು ಸುಲಭವಾಗಿ ಸಡಿಲವಾಗುತ್ತದೆ. ನಂತರ ನಿಧಾನವಾಗಿ ಹಿಂಡಿದ್ರೆ ಸಿಪ್ಪೆ ತಕ್ಷಣ ಬಿದ್ತು ಹೋಗುತ್ತದೆ.
- ಮೈಕ್ರೋವೇವ್ ಟ್ರಿಕ್: ಮೈಕ್ರೋವೇವ್‌ನಲ್ಲಿ ಬೆಳ್ಳುಳ್ಳಿ ಎಸಳುಗಳನ್ನು 10–15 ಸೆಕೆಂಡ್ ಬಿಸಿ ಮಾಡಿದರೆ ಸಿಪ್ಪೆ ತಕ್ಷಣ ಬಿಡುತ್ತದೆ. ಮೈಲ್ಡ್ ಬಿಸಿ ಸಿಪ್ಪೆ ಸಡಿಲಗೊಳಿಸುತ್ತದೆ.
- ಚಾಕು ಉಪಾಯ: ಚಾಕುವಿನ ಅಗಲ ಬದಿಯಿಂದ ಬೆಳ್ಳುಳ್ಳಿಯನ್ನು ಸ್ವಲ್ಪ ಒತ್ತಿ. ಒತ್ತಿದ ಕ್ಷಣದಲ್ಲಿ ಸಿಪ್ಪೆ ಸಡಿಲವಾಗಿ ಹೊರಬರುತ್ತದೆ. ವೇಗವಾಗಿ ಮಾಡಬಹುದು, ಗಲೀಜಾಗುವುದಿಲ್ಲ.
- ಎರಡು ಪಾತ್ರೆ ಟ್ರಿಕ್: ಬೆಳ್ಳುಳ್ಳಿ ಎಸಳುಗಳನ್ನು ಸ್ಟೀಲ್ ಅಥವಾ ಗಾಜಿನ ಪಾತ್ರೆಗೆ ಹಾಕಿ, ಇನ್ನೊಂದು ಪಾತ್ರೆಯಿಂದ ಮುಚ್ಚಿ ಬಲವಾಗಿ ಅಲ್ಲಾಡಿಸಿ. ಕೆಲವೇ ಸೆಕೆಂಡುಗಳಲ್ಲಿ ಸಿಪ್ಪೆ ಸುಲಿಯುತ್ತದೆ. ಸಮಯವೂ ಉಳಿಯುತ್ತದೆ.

