Tuesday, October 28, 2025

ಚಿತ್ತಾಪುರ ಪಥಸಂಚಲನಕ್ಕೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಬಿಜೆಪಿ ನಿಯೋಗ ಮನವಿ

ಹೊಸ ದಿಗಂತ ವರದಿ,ಕಲಬುರಗಿ

ಚಿತ್ತಾಪುರದಲ್ಲಿ ನ.2ರಂದು ನಡೆಸಲು ಉದ್ದೇಶಿಸಿರುವ ಆರೆಸ್ಸೆಸ್ ಪಥಸಂಚಲನಕ್ಕೆ ಅನುಮತಿ ನೀಡಬೇಕೆಂದು ಬಿಜೆಪಿ ಮುಖಂಡರ ನಿಯೋಗವು ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದೆ.

ಅ.28ರಂದು ನಡೆಯುವ ಶಾಂತಿ ಸಭೆಯಲ್ಲಿ ನ.2ರಂದು ಚಿತ್ತಾಪುರದಲ್ಲಿ ನಡೆಸಲು ಉದ್ದೇಶಿಸಿರುವ ಆರ್ ಎಸ್ ಎಸ್ ಪಥಸಂಚಲನಕ್ಕೆ ಅನುಮತಿ ನೀಡಬೇಕು ಎಂದು ವಿನಂತಿಸಿದ್ದಾರೆ.ಅಲ್ಲದೇ, ತಮ್ಮಲ್ಲಿ ವಿನಂತಿಸಿಕೊಂಡಿರುವ ಬೇರೆ ಎಲ್ಲಾ ಸಂಘಟನೆಗಳಿಗೂ ಪಥಸಂಚಲನಕ್ಕೆ ಅವಕಾಶ ನೀಡಲು ನಮ್ಮದು ಯಾವುದೇ ತರಹದ ಅಭ್ಯಂತರ ಇರುವುದಿಲ್ಲವೆಂಬುವುದನ್ನು ಸಹ ತಮ್ಮ ಗಮನಕ್ಕೆ ತರಬಯಸುತ್ತೇವೆ ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಬಿಜೆಪಿ ನಿಯೋಗದಲ್ಲಿ ಮಾಜಿ ಸಂಸದ ಡಾ.ಉಮೇಶ್ ಜಾಧವ್, ಶಾಸಕ ಡಾ. ಅವಿನಾಶ್ ಜಾಧವ, ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಅಂಬರಾಯ ಅಷ್ಟಗಿ, ಶರಣಪ್ಪ ತಳವಾರ್, ಬಸವರಾಜ ಬೆಣ್ಣೂರ, ಧರ್ಮಣ್ಣ ಇಟಗಾ ಸೇರಿದಂತೆ ಅನೇಕ ಮುಖಂಡರು ಇದ್ದರು.

error: Content is protected !!