Sunday, November 2, 2025

FOOD | ಆಲ್ಮಂಡ್ ಚಿಕನ್ ಗ್ರೇವಿ: ರುಚಿಯ ಜೊತೆಗೆ ಪೌಷ್ಟಿಕಾಂಶ ತುಂಬಿದ ವಿಶೇಷ ಅಡುಗೆ!

ಒಮ್ಮೆ ಚಿಕನ್ ಸಾರು ಅಥವಾ ಗ್ರೇವಿ ಮಾಡಿದ್ರೆ ಅದು ಒಂದೇ ರುಚಿ ಅಂತ ಅನಿಸುವವರಿಗಾಗಿ ಈ ಆಲ್ಮಂಡ್ ಚಿಕನ್ ಗ್ರೇವಿ ಒಂದು ಸ್ಪೆಷಲ್ ಆಯ್ಕೆ. ಬಾದಾಮಿ, ಗೋಡಂಬಿ ಮತ್ತು ತೆಂಗಿನ ಹಾಲಿನಿಂದ ಮಾಡಿದ ಈ ಗ್ರೇವಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಭರಿತವಾಗಿದ್ದು ದೇಹಕ್ಕೆ ಪೋಷಕಾಂಶ ನೀಡುತ್ತದೆ. ರೋಟಿ, ನಾನ್ ಅಥವಾ ಬಿಸಿಬಿಸಿ ಅನ್ನದ ಜೊತೆ ಸವಿಯಲು ಈ ಡಿಶ್‌ ಅತ್ಯುತ್ತಮ.

ಬೇಕಾಗುವ ಪದಾರ್ಥಗಳು:

ಚಿಕನ್ – 500 ಗ್ರಾಂ
ಈರುಳ್ಳಿ – 3
ಟೊಮೆಟೋ – 1
ಬೆಳ್ಳುಳ್ಳಿ – 15 ಹಿತ್ತಳೆ
ದಾಲ್ಚಿನ್ನಿ ಚಕ್ಕೆ – 1 ಇಂಚು ತುಂಡು
ಕಲ್ಲಂಗಡಿ ಬೀಜಗಳು – ½ ಕಪ್
ಬಿಳಿ ಎಳ್ಳು – 3 ಟೀಸ್ಪೂನ್
ಬಾದಾಮಿ – 20 (ಪೇಸ್ಟ್ ಆಗಿ ರುಬ್ಬಿದ)
ಏಲಕ್ಕಿ – 4
ಗೋಡಂಬಿ – 10
ತೆಂಗಿನ ಹಾಲು – 1 ಕಪ್
ತುಪ್ಪ ಅಥವಾ ಎಣ್ಣೆ – 3 ಟೀಸ್ಪೂನ್
ಅರಿಶಿನ ಪುಡಿ – 1 ಟೀಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಹಸಿರು ಮೆಣಸಿನಕಾಯಿ – 3
ಪುದೀನಾ ಎಲೆಗಳು – 5
ಶುಂಠಿ – 1 ಇಂಚು
ಲವಂಗ – 5
ಕರಿಮೆಣಸು – 4
ಜೀರಿಗೆ – 1 ಟೀಸ್ಪೂನ್
ದಾಲ್ಚಿನ್ನಿ ಎಲೆ – 1
ಸಕ್ಕರೆ – 1 ಟೀಸ್ಪೂನ್
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ಮೊಸರು – ½ ಕಪ್
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

ಮೊದಲು ಚಿಕನ್ ತುಂಡುಗಳಿಗೆ ಅರಿಶಿನ, ಮೆಣಸಿನ ಪುಡಿ, ಕರಿಮೆಣಸಿನ ಪುಡಿ, ಉಪ್ಪು ಮತ್ತು ಮೊಸರು ಸೇರಿಸಿ 20 ನಿಮಿಷ ಮ್ಯಾರಿನೇಟ್ ಮಾಡಿ.

ಪ್ಯಾನ್‌ನಲ್ಲಿ ಎಣ್ಣೆ ಹಾಕಿ, ಈರುಳ್ಳಿ ಹುರಿದು ಬಾದಾಮಿ, ಗೋಡಂಬಿ, ಎಳ್ಳು, ಕಲ್ಲಂಗಡಿ ಬೀಜ ಹಾಗೂ ಏಲಕ್ಕಿ ಸೇರಿಸಿ 3 ನಿಮಿಷ ಫ್ರೈ ಮಾಡಿ. ನಂತರ ತೆಂಗಿನ ಹಾಲು ಸೇರಿಸಿ ಕಂದು ಬಣ್ಣ ಬರುವವರೆಗೆ ಬೇಯಿಸಿ ತಣ್ಣಗಾದ ಮೇಲೆ ಪೇಸ್ಟ್ ಆಗಿ ರುಬ್ಬಿಕೊಳ್ಳಿ.

ಬೇರೆ ಜಾರಿನಲ್ಲಿ ಟೊಮೆಟೋ, ಶುಂಠಿ, ಬೆಳ್ಳುಳ್ಳಿ, ಪುದೀನಾ, ಕೊತ್ತಂಬರಿ, ಮೆಣಸಿನಕಾಯಿ ಸೇರಿಸಿ ಪೇಸ್ಟ್ ಮಾಡಿ.

ಪಾತ್ರೆಯಲ್ಲಿ ತುಪ್ಪ ಹಾಕಿ ಜೀರಿಗೆ, ದಾಲ್ಚಿನ್ನಿ, ಲವಂಗ, ಎಲೆ ಹಾಕಿ ಹುರಿದು ಬಿಳಿ ಪೇಸ್ಟ್ ಸೇರಿಸಿ ಹುರಿಯಿರಿ. ನಂತರ ಹಸಿರು ಪೇಸ್ಟ್ ಸೇರಿಸಿ, ಮ್ಯಾರಿನೇಟ್ ಮಾಡಿದ ಚಿಕನ್ ಹಾಕಿ 20 ನಿಮಿಷ ಬೇಯಿಸಿ. ಕೊನೆಯಲ್ಲಿ ಹುರಿದ ಈರುಳ್ಳಿ ಹಾಗೂ ಕೊತ್ತಂಬರಿ ಸೇರಿಸಿ ಅಲಂಕರಿಸಿ.

error: Content is protected !!