ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಟನಲ್ ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಡಿಸಿಎಂ ಡಿಕೆಶಿ ಅವರ ಜೊತೆ 1 ಗಂಟೆಗೂ ಹೆಚ್ಚು ಕಾಲ ಚರ್ಚೆ ಆಯ್ತು. ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹಾರದ ಬಗ್ಗೆ ಸುದೀರ್ಘ ಚರ್ಚೆ ಆಯ್ತು. ಬಹಳ ಶಾಂತವಾಗಿ ನಾನು ಕೊಟ್ಟ ಪ್ರೆಸೆಂಟೇಷನನ್ನ ಕೇಳಿದ್ರು. ಬೆಂಗಳೂರಿಗೆ ಮೆಟ್ರೋ ಬರೋದರಲ್ಲಿ ಅವರ ಪಾತ್ರ ಏನು ಎಂಬುದನ್ನ ಡಿ.ಕೆ.ಶಿವಕುಮಾರ್ ಅವರು ನನಗೆ ತಿಳಿಸಿದರು. ಎಸ್.ಎಂ.ಕೃಷ್ಣ ಅವಧಿಯಲ್ಲಿ ಅನಂತ್ ಕುಮಾರ್ ಅವರು ಬೇರೆ ದೇಶದ ವ್ಯವಸ್ಥೆ ಎಲ್ಲಾ ನೋಡಿ ಹೇಗೆ ವರದಿ ಕೊಟ್ರು ಅಂತ ಹೇಳಿದರು ಎಂದರು.
ಟನಲ್ ರಸ್ತೆ ಕೇವಲ 30-35 ಕಿ.ಮೀ.ಗೆ 47 ಸಾವಿರ ಕೋಟಿ ಖರ್ಚು ಮಾಡುವ ಬದಲು ಬಸ್ಸು ಬೇರೆ ಬೇರೆ ಇನ್ಫಾಟ್ರಕ್ಚರ್ ಅಭಿವೃದ್ಧಿಗೆ ಬಳಸಬಹುದು. ಇವತ್ತು ಟನಲ್ ರೋಡ್‌ನ ಎಲ್ಲಾ ಸಮಸ್ಯೆ ಬಗ್ಗೆ ನಾನು ತಿಳಿಸಿದ್ದೇನೆ. ಎಲ್ಲವನ್ನೂ ಅವರು ಕೇಳಿದ್ದಾರೆ. ಅವರು ಏನೂ ತೀರ್ಮಾನ ಮಾಡ್ತಾರೆ ನೋಡಬೇಕು. ಚೀನಾ ಸೇರಿದಂತೆ ಬೇರೆ ಬೇರೆ ಕಡೆ ಫ್ಲೈಓವರ್ ಕೆಡವಿರುವ ಘಟನೆ ನಡೆದಿದೆ. ಟನಲ್ ಕೂಡ ಮಾಡದೆ ನಿಲ್ಲಿಸಿದ ಬೆಳವಣಿಗೆಯೂ ಆಗಿದೆ. ಟನಲ್ ರೋಡ್‌ನ ಕೈಬಿಡಿ, ಜಿದ್ದಿಗೆ ತಗೊಂಡು ಮಾಡೋದಲ್ಲ. ಸಬ್‌ಅರ್ಬನ್ ರೈಲು ಹಾಗೂ ಮೆಟ್ರೋ ರೈಲಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ಟನಲ್‌ಗಿಂತ ಕಡಿಮೆ ವೆಚ್ಚದಲ್ಲಿ ಆಗುತ್ತದೆ ಎಂದು ಸಂಸದ ಸಲಹೆ ನೀಡಿದರು.

