Tuesday, November 4, 2025

ರಾಜ್ಯ ಮಟ್ಟದ ಜನಪದ/ಕನ್ನಡ ಗೀತೆಗಳ ನೃತ್ಯ ಸ್ಪರ್ಧೆ ಇದೆಯಂತೆ! ಭಾಗವಹಿಸ್ತೀರಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಕನ್ನಡ ರಾಜ್ಯೋತ್ಸವ –2025ರ ಅಂಗವಾಗಿ ರಾಜ್ಯ ಮಟ್ಟದ ಜನಪದ /ಕನ್ನಡ ಗೀತೆಗಳ ನೃತ್ಯ (ಗುಂಪು ಸ್ಪರ್ಧೆ) ಯನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

ಈ ಸ್ಪರ್ಧೆಯನ್ನು ಕಬ್ಬನ್ ಉದ್ಯಾನವನ, ಬೆಂಗಳೂರಿನಲ್ಲಿರುವ ರಾಜ್ಯ ಸರ್ಕಾರಿ ನೌಕರರ ಕೇಂದ್ರ ಸಂಘದ ಆವರಣದಲ್ಲಿ ನವೆಂಬರ್ 8ರಂದು ಹಮ್ಮಿಕೊಳ್ಳಲಾಗುತ್ತಿದೆ. ರಾಜ್ಯಾದ್ಯಂತ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಖಾಯಂ ನೌಕರರು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ.

ಆಸಕ್ತರು ತಮ್ಮ ತಂಡಗಳನ್ನು ನವೆಂಬರ್ 2ರ ಸಂಜೆ 5 ಗಂಟೆಯೊಳಗೆ ಕೆಳಗಿನ ಲಿಂಕ್ ಮೂಲಕ ಆನ್‍ಲೈನ್‍ನಲ್ಲಿ ನೋಂದಾಯಿಸಿಕೊಳ್ಳಬಹುದು.

ವಿಜೇತರಿಗೆ ಭಾರೀ ಬಹುಮಾನಗಳು ನೀಡಲಾಗುತ್ತೆ. ಬಹುಮಾನಗಳ ವಿವರ ಈ ರೀತಿ ಇದೆ ನೋಡಿ..

ಪ್ರಥಮ ಬಹುಮಾನ: ರೂ. 1,00,000

ದ್ವಿತೀಯ ಬಹುಮಾನ: ರೂ. 75,000

ತೃತೀಯ ಬಹುಮಾನ: ರೂ. 50,000

ಸಮಾಧಾನಕರ ಬಹುಮಾನ: ರೂ. 20,000

error: Content is protected !!