Thursday, November 27, 2025

ಪುನೀತ್‌ ಪುಣ್ಯಸ್ಮರಣೆ: ಸ್ಮಾರಕದತ್ತ ಅಭಿಮಾನಿಗಳ ದಂಡು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ಪುನೀತ್​ ರಾಜ್​ಕುಮಾರ್ ನಿಧನರಾಗಿ ನಾಲ್ಕು ವರ್ಷ ಕಳೆದಿದೆ. ಇಂದು 4ನೇ ಪುಣ್ಯ ಸ್ಮರಣೆ ಪ್ರಯುಕ್ತ ಅಪ್ಪು ಸಮಾಧಿಗೆ ಹೂವುಗಳಿಂದ ಅಲಂಕಾರ ಮಾಡಲಾಗಿದೆ.

ಬೆಳಗ್ಗಿನಿಂದಲೇ ಅಭಿಮಾನಿಗಳು ಆಗಮಿಸುತ್ತಿದ್ದು, ಅಪ್ಪುವನ್ನ ಸ್ಮರಿಸುತ್ತಿದ್ದಾರೆ. ಡಾ. ರಾಜ್​ಕುಮಾರ್​ ಕುಟುಂಬದ ಸದಸ್ಯರು ಕೂಡ ಆಗಮಿಸಿ ಪೂಜೆ ಸಲ್ಲಿಸಲಿದ್ದಾರೆ.

ಅಪ್ಪು ಪುಣ್ಯ ಸ್ಮರಣೆ ಹಿನ್ನೆಲೆ ಕಂಠೀರವ ಸ್ಟುಡಿಯೋ ಬಳಿ ಸಕಲ‌ ಸಿದ್ದತೆ ಮಾಡಿಕೊಳ್ಳಲಾಗಿದೆ. ಸ್ಮಾರಕಕ್ಕೆ ಹೂವುಗಳಿಂದ ಅಲಂಕಾರ ಮಾಡಲಾಗಿದೆ. ದೂರದೂರುಗಳಿಂದ ಅಭಿಮಾನಿಗಳು ತಂಡೋಪ ತಂಡವಾಗಿ ಆಗಮಿಸುತ್ತಿದ್ದು, ಪುನೀತ್ ಸ್ಮಾರಕಕ್ಕೆ ನಮಿಸುತ್ತಿದ್ದಾರೆ.

ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳ ಜೊತೆ ಇಲ್ಲದಿದ್ರೂ ಅವರು ಮಾಡಿದ ಸಾಮಾಜಿಕ ಕೆಲಸ, ಜನ ಸೇವೆಗಳು ಜೀವಂತವಾಗಿದೆ. ಒಂದು ಕೈಯಲ್ಲಿ ಕೊಟ್ಟಿದ್ದು ಮತ್ತೊಂದು ಕೈಗೆ ಗೊತ್ತಾಗಬಾರದು ಎಂಬ ತತ್ವ ನಂಬಿದ್ದ ಅಪ್ಪು ಅನೇಕ ಸಾಮಾಜಿಕ ಕೆಲಸಗಳನ್ನ ಮಾಡಿದ್ದು, ಇವುಗಳನ್ನು ಇಂದಿಗೂ ಜನರು ನೆನಪಿಕೊಳ್ತಾರೆ.ಅಪ್ಪು 4ನೇ ಪುಣ್ಯ ಸ್ಮರಣೆ ಹಿನ್ನೆಲೆ ಕಂಠೀರವ ಸ್ಟುಡಿಯೋ ಬಳಿ ಇರುವ ಸ್ಮಾರಕದಲ್ಲಿ ಅನ್ನದಾನ, ರಕ್ತದಾನ, ಬಡ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಲಾಗ್ತಿದೆ. ಇಂದು ಇಡೀ ದಿನ ಅಭಿಮಾನಿಗಳಿಗಾಗಿ ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

error: Content is protected !!