Wednesday, November 5, 2025

ನಿವೃತ್ತಿ ವದಂತಿ ಮಧ್ಯೆ ನಂ.1 ಪಟ್ಟಕ್ಕೇರಿದ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿವೃತ್ತಿಯ ವದಂತಿ ನಡುವೆ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಹೊಸ ಮೈಲುಗಲ್ಲು ಸಾಧಿಸಿದ್ದಾರೆ. ತಮ್ಮ 38ನೇ ವಯಸ್ಸಿನಲ್ಲಿ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ.1 ಬ್ಯಾಟ್ಸ್‌ ಮನ್ ಆಗಿ ಹೊರಹೊಮ್ಮಿದ್ದಾರೆ.

ಇಂದು ಬಿಡುಗಡೆಯಾದ ನೂತನ ಏಕದಿನ ರ‍್ಯಾಂಕಿಗ್‌ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ಶುಭಮನ್‌ ಗಿಲ್‌ರನ್ನ ಹಿಂದಿಕ್ಕಿ ಹಿಂದಿಕ್ಕಿ ವಿಶ್ವದ ನಂ.1 ಬ್ಯಾಟರ್‌ ಆಗಿ ಮಿಂಚಿದ್ದಾರೆ. ಆದ್ರೆ 5ನೇ ಸ್ಥಾನದಲ್ಲಿದ್ದ ಕೊಹ್ಲಿ 6ನೇ ಸ್ಥಾನಕ್ಕೆ ಕುಸಿದಿರೋದು ಅಭಿಮಾನಿಗಳಿಗೆ ಬೇಸರ ತರಿಸಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಏಕೆದಿನ ಸರಣಿಯಲ್ಲಿ ಹಿಟ್‌ ಮ್ಯಾನ್‌ ಗರಿಷ್ಠ ರನ್‌ ಗಳಿಸಿದ್ದರು. ಮೂರು ಪಂದ್ಯಗಳಲ್ಲಿ 1 ಶತಕ, 1 ಅರ್ಧಶತಕ ಸೇರಿ 202ರ ರನ್‌ಗಳಿಸಿ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ರು. 

ನೂತನವಾಗಿ ಬಿಡುಗಡೆಯಾದ ಏಕದಿನ ರ‍್ಯಾಂಕಿಗ್‌ನಲ್ಲಿ 781 ಅಂಕಗಳೊಂದಿಗೆ ಹಿಟ್‌ಮ್ಯಾನ್ ಅಗ್ರಸ್ಥಾನದಲ್ಲಿದ್ದಾರೆ. ಅಫ್ಘಾನ್‌ನ ಇಬ್ರಾಹಿಂ ಜದ್ರಾನ್ 764, ಶುಭಮನ್‌ ಗಿಲ್‌ 745 ಅಂಕ, ಪಾಕ್‌ನ ಬಾಬರ್‌ ಆಜಂ 739 ಅಂಕ, ಕಿವೀಸ್‌ನ ಡೇರಿಲ್‌ ಮಿಚೆಲ್‌ 734 ಅಂಕಗಳೊಂದಿಗೆ ಕ್ರಮವಾಗಿ 2,3,4,5ನೇ ಸ್ಥಾನಗಳಲ್ಲಿದ್ದಾರೆ.

error: Content is protected !!