Wednesday, November 5, 2025

ತೆಲಂಗಾಣ ವ್ಯಾಪಾರಿ ಪರ ಜಮೀರ್‌ ಖಾನ್‌ ‘ಬ್ಯಾಟ್’ ಬೀಸಿದ್ದೇಕೆ? ಏನಿದು ‘ಸೆಟ್ಲ್‌ಮೆಂಟ್‌’ ವಿವಾದ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲಂಗಾಣದ ವ್ಯಾಪಾರಿಗಳ ಪರ ಪ್ರಭಾವ ಬೀರಿದ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಆರೋಪದ ಕುರಿತು ‘ಬ್ಯಾಟ್’ ಬೀಸಿರುವ ಸಚಿವರು, “ದುಡ್ಡು ತೆಗೆದುಕೊಂಡಿದ್ದು ನಿಜ, ಆದರೆ ಅವರು ಹೇಳುವಷ್ಟು ದುಡ್ಡಲ್ಲ. ಹಾಗೇನಾದರೂ ಇದ್ದರೆ ರಾಜಿ ಮಾಡಿಕೊಳ್ಳಿ ಎಂದು ಹೇಳಿದ್ದೇನೆ, ಅದರಲ್ಲಿ ತಪ್ಪೇನಿದೆ?” ಎಂದು ಪ್ರಶ್ನಿಸಿದ್ದಾರೆ.

ಯಾರದೇ ವೈಯಕ್ತಿಕ ವ್ಯವಹಾರದಲ್ಲಿ ತಾನು ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿರುವ ಅವರು, “ಅವರವರ ವ್ಯವಹಾರದಲ್ಲಿ ನಾನೇನು ಮಾಡುವುದಕ್ಕೆ ಆಗುತ್ತೆ,” ಎಂದಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯ ಆಗುವುದಕ್ಕೆ ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. “ಎರಡೂ ಕಡೆಯವರನ್ನ ಕೂರಿಸಿ ಸೆಟ್ಲ್ ಮಾಡುವುದಕ್ಕೆ ಹೇಳಿದ್ದೇನೆ,” ಎಂದು ಜಮೀರ್ ಖಾನ್ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಈ ಹೇಳಿಕೆಯು ರಾಜಕೀಯ ವಲಯದಲ್ಲಿ ಮತ್ತು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.

error: Content is protected !!