Tuesday, November 4, 2025

ಇಂದು National Text Your Ex Dayಯಂತೆ! ಮನಸ್ಸಿದ್ರೆ ಒಂದು ಮೆಸೇಜ್‌ ಕಳಿಸಿಯೇ ಬಿಡಿ!

ಪ್ರೀತಿ ಒಂದು ಸಿನಿಮಾ ಅಂದ್ರೆ ನಿಮ್ಮ ‘ಎಕ್ಸ್‌’ ಆ ಸಿನಿಮಾದ ಸಂಪೂರ್ಣವಾಗದ ಕ್ಲೈಮ್ಯಾಕ್ಸ್‌. ಆದರೆ ಅಕ್ಟೋಬರ್‌ 30 ಬಂದಾಕ್ಷಣ ಆ ಕ್ಲೈಮ್ಯಾಕ್ಸ್‌ಗೆ ಹೊಸ ಟ್ವಿಸ್ಟ್‌ ಕೊಡೋ ಅವಕಾಶ ಬರುತ್ತದೆ! ಹೌದು, ಇದೇ ದಿನ National Text Your Ex Day ಅಂದರೆ, ನಿಮ್ಮ ಹಳೆಯ ಪ್ರೇಮಿಯನ್ನು ಒಂದು ಮೆಸೇಜ್‌ನಿಂದ ನೆನಪಿಸಿಕೊಳ್ಳುವ ದಿನ.

ಈ ದಿನದ ಅರ್ಥ ಕೇವಲ “how are you?” ಕಳಿಸುವುದು ಅಲ್ಲ, ಅದು ಭಾವನೆಗಳ ಬ್ಯಾಕ್‌ಅಪ್‌ ರಿಸ್ಟೋರ್‌ ಮಾಡುವ ದಿನ! ಕೆಲವರು ಕ್ಷಮೆ ಕೇಳುತ್ತಾರೆ, ಇನ್ನು ಕೆಲವರು ‘ಮಿಸ್‌ ಯು’ ಹೇಳುತ್ತಾರೆ, ಮತ್ತೆ ಕೆಲವರು ನಗು ಮುಖದಿಂದ ಮುಗಿದು ಹೋದ ಕಥೆಯನ್ನು ಒಂದು ಮೆಸೇಜ್‌ನಿಂದ ಮುಚ್ಚಿಹಾಕುತ್ತಾರೆ.

ಜೀವನದಲ್ಲಿ ಒಂದು ಸಮಯದಲ್ಲಿ ನಮ್ಮ ಹೃದಯಕ್ಕೆ ಹತ್ತಿರವಾಗಿದ್ದವರು ನಂತರ ದೂರವಾದರೂ, ಅವರ ನೆನಪುಗಳು ಕೆಲವೊಮ್ಮೆ ಹೃದಯದ ಮೂಲೆಗಳಲ್ಲಿ ಉಳಿಯುತ್ತವೆ. ಇಂತಹ ಸಂದರ್ಭಗಳಲ್ಲಿ ಈ ದಿನವನ್ನು ಹಳೆಯ ಸಂಬಂಧದ ನೆನಪುಗಳನ್ನು ಮರುಜೀವನಗೊಳಿಸಲು, ಕ್ಷಮೆ ಕೇಳಲು ಅಥವಾ ಕೇವಲ ಸ್ನೇಹಪೂರ್ವಕ ಸಂದೇಶ ಕಳುಹಿಸಲು ಪ್ರೇರೇಪಿಸುವ ದಿನವನ್ನಾಗಿ ಬಳಸಿಕೊಳ್ಳಿ.

ಸಾಮಾಜಿಕ ಜಾಲತಾಣಗಳಲ್ಲಿ ಈ ದಿನದ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್‌ ಆಗುತ್ತವೆ; ಹಲವರು ತಮ್ಮ ಹಳೆಯ ಪ್ರೇಮ ಕಥೆಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ನಿಜವಾದ ಅರ್ಥದಲ್ಲಿ, National Text Your Ex Day ನಮ್ಮ ಭಾವನೆಗಳನ್ನು ಸ್ವೀಕರಿಸಿ, ಭೂತಕಾಲವನ್ನು ಗೌರವದಿಂದ ಬಿಟ್ಟು ಮುನ್ನುಗ್ಗಲು ಒಂದು ಅವಕಾಶ ನೀಡುತ್ತದೆ.

error: Content is protected !!