ನಿಮ್ಮ ಊಟದ ಟೇಬಲ್ ಮೇಲೆ ಸ್ಪೆಷಲ್ ಡಿಶ್ ಬೇಕಾ? ಹಾಗಿದ್ರೆ ಈ ಚಿಕನ್ ರೋಸ್ಟ್ ಪರ್ಫೆಕ್ಟ್ ಆಯ್ಕೆ. ವಿಶೇಷವಾದ ಮಸಾಲೆ ಮತ್ತು ಕೊಬ್ಬರಿ ಎಣ್ಣೆಯ ಪರಿಮಳ ಈ ರೆಸಿಪಿಯನ್ನ ಇನ್ನೂ ರುಚಿಕರಗೊಳಿಸುತ್ತದೆ. ಬನ್ನಿ, ಮನೆಯಲ್ಲೇ ಚಿಕನ್ ರೋಸ್ಟ್ ಹೇಗೆ ತಯಾರಿಸೋದು ನೋಡೋಣ.
ಬೇಕಾಗುವ ಸಾಮಗ್ರಿಗಳು:
ಚಿಕನ್ – 1 ಕೆಜಿ
ಮೆಣಸಿನಪುಡಿ – 1 ಚಮಚ
ಗರಂ ಮಸಾಲೆ – 1 ಚಮಚ
ಅರಿಶಿನ – ಅರ್ಧ ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಕೊತ್ತಂಬರಿ ಸೊಪ್ಪು ಮತ್ತು ಪುದೀನ ಪೇಸ್ಟ್ – ಸ್ವಲ್ಪ
ಕೊಬ್ಬರಿ ಎಣ್ಣೆ – 1 ಕಪ್
ಮಾಡುವ ವಿಧಾನ:
ಮೊದಲು ಚಿಕನ್ ಅನ್ನು ಚೆನ್ನಾಗಿ ತೊಳೆದು ಇಡಿ. ಒಂದು ದೊಡ್ಡ ಪಾತ್ರೆಯಲ್ಲಿ ಮೆಣಸಿನಪುಡಿ, ಗರಂ ಮಸಾಲೆ, ಅರಿಶಿನ, ಉಪ್ಪು, ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಹಾಗೂ ಕೊತ್ತಂಬರಿ–ಪುದೀನ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈ ಮಸಾಲೆ ಮಿಶ್ರಣದಲ್ಲಿ ಚಿಕನ್ ತುಂಡುಗಳನ್ನು ಹಾಕಿ ಚೆನ್ನಾಗಿ ಕಲಸಿ, ಕನಿಷ್ಠ ಒಂದು ಗಂಟೆ ನೆನೆಸಿಡಿ. ನಂತರ ಬಾಣಲೆಗೆ ಕೊಬ್ಬರಿ ಎಣ್ಣೆ ಹಾಕಿ ಬಿಸಿ ಮಾಡಿ. ಮ್ಯಾರಿನೇಟ್ ಮಾಡಿದ ಚಿಕನ್ ಸೇರಿಸಿ ಮಧ್ಯಮ ಉರಿಯಲ್ಲಿ ಬಣ್ಣ ಬದಲಾಗುವವರೆಗೆ ಬೇಯಿಸಿ.

