Sunday, November 2, 2025

1 ಕೋಟಿ ಸರ್ಕಾರಿ ಉದ್ಯೋಗ ಸೃಷ್ಟಿ, 1 ಕೋಟಿ ಲಖ್‌ಪತಿ ದೀದಿಗಳಿಗೆ ನೆರವು: NDA ಪ್ರಣಾಳಿಕೆ ಗಿಫ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಹಾರ ವಿಧಾನಸಭಾ ಚುನಾವಣೆ ಮತದಾನಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಸಾಮೂಹಿಕ ವಲಸೆಗೆ ಹೆಸರುವಾಸಿಯಾದ ರಾಜ್ಯದಲ್ಲಿ ಒಂದು ಕೋಟಿ ಸರ್ಕಾರಿ ಉದ್ಯೋಗಗಳನ್ನು ಒದಗಿಸುವ ಮೆಗಾ ಭರವಸೆ ನೀಡಿದೆ.

ಎನ್‌ಡಿಎ ‘ಸಂಕಲ್ಪ ಪತ್ರ’ವನ್ನು ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂದು ಬೆಳಿಗ್ಗೆ ಪಾಟ್ನಾದಲ್ಲಿ ಮೈತ್ರಿಕೂಟದ ಹಿರಿಯ ನಾಯಕರ ಸಮ್ಮುಖದಲ್ಲಿ ಬಿಡುಗಡೆ ಮಾಡಿದರು.

ಮಹಿಳಾ ಸಬಲೀಕರಣ ಯೋಜನೆಗಳ ಮೇಲೆ ವಿಶೇಷ ಗಮನ ಹರಿಸಲಾಗಿದೆ. ಬಿಹಾರದಲ್ಲಿ ನಾಲ್ಕು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು, ಏಳು ಎಕ್ಸ್‌ಪ್ರೆಸ್‌ವೇಗಳ ನಿರ್ಮಾಣ ಸೇರಿದಂತೆ ಪ್ರಮುಖ ಮೂಲಸೌಕರ್ಯ ಅಭಿಯಾನದ ಜೊತೆಗೆ, ಒಂದು ಕೋಟಿ ಮಹಿಳೆಯರನ್ನು ‘ಲಕ್ಷಪತಿ ದೀದಿ’ಗಳನ್ನಾಗಿ ಪರಿವರ್ತಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಎನ್‌ಡಿಎ ಹೊಂದಿದೆ.

ಪ್ರತಿ ವರ್ಷ ಕಾರ್ಮಿಕರ ಬೃಹತ್ ವಲಸೆಯನ್ನು ಕಾಣುವ ರಾಜ್ಯದಲ್ಲಿ ಉದ್ಯೋಗಾವಕಾಶಗಳ ಬಗ್ಗೆ ಅತಿದೊಡ್ಡ ಘೋಷಣೆಯಾಗಿತ್ತು. ಮತ್ತೊಮ್ಮೆ ಆಯ್ಕೆಯಾದರೆ, ಬಿಹಾರದ ಪ್ರತಿಯೊಬ್ಬ ಯುವಕರಿಗೂ ಕೌಶಲ್ಯ ಆಧಾರಿತ ಉದ್ಯೋಗವನ್ನು ಒದಗಿಸಲು ಕೌಶಲ್ಯ ಜನಗಣತಿಯನ್ನು ನಡೆಸುವುದಾಗಿ ಎನ್‌ಡಿಎ ಭರವಸೆ ನೀಡಿತ್ತು. ಪ್ರತಿ ಜಿಲ್ಲೆಯಲ್ಲಿ ಮೆಗಾ ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸಿ ಬಿಹಾರವನ್ನು ಜಾಗತಿಕ ಕೌಶಲ್ಯ ಕೇಂದ್ರವಾಗಿ ರೂಪಿಸುತ್ತೇವೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.

error: Content is protected !!