January17, 2026
Saturday, January 17, 2026
spot_img

Women’s World Cup Final: ಟೀಮ್ ಇಂಡಿಯಾದಿಂದ ಆಫ್ರಿಕಾಗೆ 299 ರನ್ ಟಾರ್ಗೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2025ರ ಮಹಿಳಾ ವಿಶ್ವಕಪ್‌ನ ರೋಚಕ ಅಂತಿಮ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಕಣಕ್ಕಿಳಿದಿವೆ. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 288 ರನ್‌ಗಳ ಭರ್ಜರಿ ಮೊತ್ತವನ್ನು ರಚಿಸಿದೆ. ಈ ಮೂಲಕ ಭಾರತವು ಆಫ್ರಿಕಾ ತಂಡಕ್ಕೆ 299 ರನ್‌ಗಳ ಗೆಲುವಿನ ಗುರಿ ನೀಡಿದೆ.

ಭಾರತ ಪರ ಶಫಾಲಿ ವರ್ಮಾ ಮತ್ತು ದೀಪ್ತಿ ಶರ್ಮಾ ತಲಾ ಅರ್ಧಶತಕ ಬಾರಿಸಿ ತಂಡದ ಇನ್ನಿಂಗ್ಸ್‌ಗೆ ಬಲ ನೀಡಿದರು. ಶಫಾಲಿಯ 87 ಮತ್ತು ದೀಪ್ತಿಯ 58 ರನ್‌ಗಳ ಸ್ಮರಣೀಯ ಪ್ರದರ್ಶನ ತಂಡವನ್ನು ಸ್ಪರ್ಧಾತ್ಮಕ ಮೊತ್ತದತ್ತ ಕೊಂಡೊಯ್ದಿತು. ಆರಂಭಿಕ ಬ್ಯಾಟರ್‌ಗಳು ಶ್ರೇಷ್ಠ ಪ್ರದರ್ಶನ ನೀಡಿದರೆ, ಮಧ್ಯಮ ಕ್ರಮಾಂಕದ ಕುಸಿತ ಭಾರತವನ್ನು 300ರ ಒಳಗೆ ತಡೆದಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಕ್ಕಿತು. ಆರಂಭಿಕರಾದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಮೊದಲ ವಿಕೆಟ್‌ಗೆ 105 ರನ್‌ಗಳ ಅಮೂಲ್ಯ ಜೊತೆಯಾಟ ನೀಡಿದರು. ಈ ವೇಳೆ ಸ್ಮೃತಿ 45 ರನ್‌ಗಳ ಉತ್ತಮ ಇನಿಂಗ್ಸ್‌ ಆಡಿದ ನಂತರ ಔಟಾದರು. ಸೆಮಿಫೈನಲ್‌ನಲ್ಲಿ ಶತಕ ಬಾರಿಸಿದ್ದ ಜೆಮಿಮಾ ರೊಡ್ರಿಗಸ್ ಈ ಬಾರಿ 24 ರನ್‌ಗಳಷ್ಟೇ ಗಳಿಸಿದರು.

ಒಂದು ಹಂತದಲ್ಲಿ ಭಾರತ 350 ರನ್‌ಗಳತ್ತ ಸಾಗುತ್ತಿರುವಂತೆ ತೋರಿಸಿದರೂ ಮಧ್ಯಮ ಕ್ರಮಾಂಕದ ನಿಧಾನಗತಿಯ ಬ್ಯಾಟಿಂಗ್ ಕಾರಣದಿಂದ ತಂಡ ಕೇವಲ 288 ರನ್‌ಗಳಷ್ಟೇ ಕಲೆಹಾಕಿತು. ಇದು ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಅತ್ಯಧಿಕ ಸ್ಕೋರ್ ಆಗಿದ್ದು, ಇತಿಹಾಸದಲ್ಲಿ ಎರಡನೇ ಅತ್ಯಧಿಕ ಮೊತ್ತವಾಗಿದೆ.

Must Read

error: Content is protected !!