Wednesday, November 5, 2025

Rice series 16 |ಪೈನಾಪಲ್ ರೈಸ್ ತಿಂದಿದ್ದೀರಾ? ಈ ರೆಸಿಪಿ ಒಮ್ಮೆ ಟ್ರೈ ಮಾಡಿ

ಅನ್ನದ ಜೊತೆ ಸಿಹಿಯಾದ ಹಣ್ಣಿನ ರುಚಿ ಸೇರಿಸಿದರೆ ಅದರ ಸುವಾಸನೆ ಮತ್ತು ರುಚಿ ಎರಡು ಪಟ್ಟು ಹೆಚ್ಚಾಗುತ್ತದೆ. ಇಂತಹ ಒಂದು ವಿಶಿಷ್ಟ ಕಾಂಬಿನೇಷನ್ ಅಂದ್ರೆ ಪೈನಾಪಲ್ ರೈಸ್. ಹಣ್ಣಿನ ಸಿಹಿ ಮತ್ತು ಮಸಾಲೆಯ ರುಚಿ ಸೇರಿ ನಾಲಿಗೆಯ ರುಚಿಗೆ ಹೊಸ ಅನುಭವ ನೀಡುತ್ತದೆ.

ಬೇಕಾಗುವ ಪದಾರ್ಥಗಳು:

ಅಕ್ಕಿ – 1 ಕಪ್
ಅನಾನಸ್ ತುಂಡುಗಳು – ½ ಕಪ್
ಈರುಳ್ಳಿ – 1
ಹಸಿಮೆಣಸಿನಕಾಯಿ – 2
ಕರಿಬೇವು – ಕೆಲವು
ಗೋಡಂಬಿ – 8 ರಿಂದ 10
ಸಾಸಿವೆ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಹಸಿಮೆಣಸಿನ ಪುಡಿ – ½ ಟೀ ಸ್ಪೂನ್
ಅರಿಶಿನ – ಸ್ವಲ್ಪ
ಎಣ್ಣೆ ಅಥವಾ ತುಪ್ಪ – 2 ಟೇಬಲ್ ಸ್ಪೂನ್

ಮಾಡುವ ವಿಧಾನ:

ಮೊದಲು ಅಕ್ಕಿಯನ್ನು ಬೇಯಿಸಿ ತಣ್ಣಗಾಗಲು ಬಿಡಿ.

ಒಂದು ಪ್ಯಾನ್‌ನಲ್ಲಿ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ ಸಾಸಿವೆ, ಕರಿಬೇವು, ಗೋಡಂಬಿ ಹಾಕಿ ಬಣ್ಣ ಬದಲಾದರೆ ಬಾಡಿಗೆ ತೆಗೆದಿಟ್ಟುಕೊಳ್ಳಿ. ಅದೇ ಪ್ಯಾನ್‌ಗೆ ಈರುಳ್ಳಿ ಹಾಗೂ ಹಸಿಮೆಣಸಿನಕಾಯಿ ಹಾಕಿ ಸಣ್ಣಗೆ ಬಣ್ಣ ಬದಲುವವರೆಗೆ ಹುರಿಯಿರಿ. ನಂತರ ಅನಾನಸ್ ತುಂಡುಗಳು, ಉಪ್ಪು, ಅರಿಶಿನ, ಹಸಿಮೆಣಸಿನ ಪುಡಿ ಹಾಕಿ 3–4 ನಿಮಿಷ ಹುರಿಯಿರಿ.

ಕೊನೆಯಲ್ಲಿ ಅನ್ನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಗೋಡಂಬಿ ಹಾಕಿ ಹುರಿದರೆ ರುಚಿಯಾದ ಪೈನಾಪಲ್ ರೈಸ್ ಸಿದ್ಧ.

error: Content is protected !!