January21, 2026
Wednesday, January 21, 2026
spot_img

BREAKING | ತೆಲಂಗಾಣದಲ್ಲಿ ಭೀಕರ ಅಪಘಾತ, ಬಸ್‌ ಮೇಲೆ ಟಿಪ್ಪರ್‌ ಬಿದ್ದು 17 ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚೆವೆಲ್ಲಾ ತಾಲೂಕಿನ ಮಿರಾಜಗುಡಾ ಬಳಿ ಆರ್​ಟಿಸಿ ಬಸ್​ ಮೇಲೆ ಟಿಪ್ಪರ್​ನಲ್ಲಿದ್ದ ಜಲ್ಲಿಕಲ್ಲು ಬಿದ್ದ ಪರಿಣಾಮ 17 ಮಂದಿ ಪ್ರಯಾಣಿಕರು ಮೃತಪಟ್ಟಿದ್ದರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪ್ರಯಾಣಿಕರು ಜಲ್ಲಿಕಲ್ಲಿನ ಅಡಿ ಸಿಲುಕಿದ್ದ ಪರಿಣಾಮ ಸ್ಥಳದಲ್ಲೇ 17 ಮಂದಿ ಅಸುನೀಗಿದ್ದರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಟಿಪ್ಪರ್‌ನಲ್ಲಿ ಅತಿಯಾದ ಲೋಡ್‌ನಷ್ಟು ಜೆಲ್ಲಿ ಇದ್ದಿದ್ದು ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಈ ಅಪಘಾತದ ಕುರಿತು ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಜೆಸಿಬಿಯಿಂದ ಜಲ್ಲಿಕಲ್ಲಿನಡಿ ಸಿಲುಕಿದವರನ್ನು ರಕ್ಷಿಸಿದರು.

ಅಪಘಾತಕ್ಕೀಡಾದ ಬಸ್​ ತಾಂಡೂರ್​ನಿಂದ ಹೈದರಾಬಾದ್​ ಕಡೆ ತೆರಳುತಿತ್ತು. ಇದರಲ್ಲಿ 70 ಮಂದಿ ಪ್ರಯಾಣಿಕರಿದ್ದು, ಬಹುತೇಕರು ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು. ವಿದ್ಯಾರ್ಥಿಗಳೆಲ್ಲರೂ ಹೈದರಾಬಾದ್​ ನ ವಿವಿಧ ಕಾಲೇಜುಗಳಲ್ಲಿ ಓದುತ್ತಿದ್ದವರಾಗಿದ್ದಾರೆ.

ಭಾನುವಾರ ರಜಾ ದಿನವಾಗಿದ್ದರಿಂದ ಅವರೆಲ್ಲರೂ ತಮ್ಮ ತಮ್ಮ ಊರುಗಳಿಗೆ ತೆರಳಿದ್ದರು. ಇಂದು ಹೈದರಾಬಾದ್​ಗೆ ವಾಪಸ್​ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

Must Read