ಮನೆಯಲ್ಲಿ ಶೂ ಮತ್ತು ಚಪ್ಪಲಿಗಳನ್ನು ಎಲ್ಲಿ ಬೇಕಾದರೂ ಇಡುವುದು ಬಹುತೇಕ ಜನರ ಅಭ್ಯಾಸ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಇದು ಕೇವಲ ಅಸಮರ್ಪಕ ಅಭ್ಯಾಸವಲ್ಲ, ನಕಾರಾತ್ಮಕ ಶಕ್ತಿಗೆ ಆಹ್ವಾನ ನೀಡುವಂತದ್ದು. ಶೂ ಮತ್ತು ಚಪ್ಪಲಿಗಳಿಂದ ಅಶುದ್ಧ ಶಕ್ತಿ ಮನೆಗೆ ಹರಿದುಬಂದು, ಶಾಂತಿ, ಆರ್ಥಿಕ ಸ್ಥಿರತೆ ಹಾಗೂ ಸಂಬಂಧಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಹೀಗಾಗಿ ಮನೆಯಲ್ಲಿ ಕೆಲವು ವಿಶೇಷ ಸ್ಥಳಗಳಲ್ಲಿ ಶೂಗಳನ್ನು ಇಡುವುದನ್ನು ತಪ್ಪಿಸುವುದು ಅತ್ಯಂತ ಮುಖ್ಯ.
- ಮಲಗುವ ಕೋಣೆ: ವಾಸ್ತು ಪ್ರಕಾರ ಮಲಗುವ ಕೋಣೆ ವಿಶ್ರಾಂತಿಯ ಸ್ಥಳ. ಈ ಕೋಣೆಯಲ್ಲಿ ಶೂ ಅಥವಾ ಚಪ್ಪಲಿಗಳನ್ನು ಇಡಬಾರದು, ವಿಶೇಷವಾಗಿ ಹಾಸಿಗೆಯ ಕೆಳಗೆ ಇಡುವುದರಿಂದ ದಾಂಪತ್ಯ ಜೀವನದಲ್ಲಿ ಅಸಮಾಧಾನ ಮತ್ತು ಕಲಹ ಹೆಚ್ಚುವ ಸಾಧ್ಯತೆ ಇದೆ.
- ಅಡುಗೆ ಮನೆ: ಅಡುಗೆ ಮನೆ ಅನ್ನಪೂರ್ಣೆಯ ವಾಸಸ್ಥಳವೆಂದು ಪರಿಗಣಿಸಲಾಗಿದೆ. ಅಲ್ಲಿ ಶೂ ಅಥವಾ ಚಪ್ಪಲಿಗಳನ್ನು ಧರಿಸಿ ಪ್ರವೇಶಿಸಿದರೆ ಅಥವಾ ಇಟ್ಟರೆ ಕೊಳಕು ಮತ್ತು ನಕಾರಾತ್ಮಕ ಶಕ್ತಿ ಒಳನುಗ್ಗುತ್ತದೆ. ಇದರಿಂದ ಆರೋಗ್ಯ ಹಾಗೂ ಆರ್ಥಿಕ ಸ್ಥಿತಿಯ ಮೇಲೆ ದುಷ್ಪರಿಣಾಮ ಬೀರುತ್ತದೆ.
- ದೇವರ ಕೋಣೆ: ದೇವರ ಕೋಣೆ ಎಂದರೆ ಶುದ್ಧತೆಯ ಮತ್ತು ಸಕಾರಾತ್ಮಕ ಶಕ್ತಿಯ ಕೇಂದ್ರ. ಈ ಪ್ರದೇಶದಲ್ಲಿ ಶೂ ಅಥವಾ ಚಪ್ಪಲಿಗಳನ್ನು ಇಡುವುದು ದೇವತೆಗಳ ಆಶೀರ್ವಾದವನ್ನು ಕಡಿಮೆ ಮಾಡುವಂತೆ ಪರಿಗಣಿಸಲಾಗಿದೆ. ಹೀಗಾಗಿ ದೇವರ ಕೋಣೆಗೆ ನಗ್ನಪಾದದಿಂದಲೇ ಪ್ರವೇಶಿಸುವುದು ಉತ್ತಮ.
- ಮನೆಯ ಮುಖ್ಯ ದ್ವಾರ: ಮುಖ್ಯ ದ್ವಾರವು ದೇವತೆಗಳು ಮತ್ತು ಲಕ್ಷ್ಮೀ ದೇವಿ ಮನೆಗೆ ಪ್ರವೇಶಿಸುವ ದಾರಿ. ಈ ಸ್ಥಳದಲ್ಲಿ ಶೂ ಮತ್ತು ಚಪ್ಪಲಿಗಳನ್ನು ಇಡುವುದು ಅವರ ದಾರಿಗೆ ಅಡ್ಡಿಯಾಗುತ್ತದೆ ಎಂದು ವಾಸ್ತು ಹೇಳುತ್ತದೆ. ಇದರಿಂದ ಬಡತನ, ತಕರಾರು ಮತ್ತು ಅಶಾಂತಿ ಮನೆಮಾಡಬಹುದು.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

