Wednesday, November 5, 2025

ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್‌ | ಟಿ20ಗೆ ಭಾರತ ಎ ತಂಡ ಘೋಷಣೆ: ಇವರೆ ನೋಡಿ ನಮ್ಮ ಕ್ಯಾಪ್ಟನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖತಾರ್‌ನಲ್ಲಿ ನಡೆಯಲಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್‌ ಟಿ20 ಟೂರ್ನಿಗಾಗಿ ಬಿಸಿಸಿಐ ಭಾರತ ಎ ತಂಡವನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ತಂಡವನ್ನು ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಮುನ್ನಡೆಸಲಿದ್ದು, ಯುವ ಬ್ಯಾಟರ್ ನಮನ್ ಧೀರ್ ಅವರನ್ನು ಉಪನಾಯಕನಾಗಿ ನೇಮಕ ಮಾಡಲಾಗಿದೆ. 15 ಸದಸ್ಯರ ಈ ತಂಡದಲ್ಲಿ ಅನೇಕ ಯುವ ಪ್ರತಿಭೆಗಳು ಅವಕಾಶ ಪಡೆದಿದ್ದು, ಅವರ ಪ್ರದರ್ಶನದ ಮೇಲೆ ಕಣ್ಣಿದೆ.

ಯುವ ದಾಂಡಿಗರಾದ ವೈಭವ್ ಸೂರ್ಯವಂಶಿ ಮತ್ತು ಪ್ರಿಯಾಂಶ್ ಆರ್ಯ ಇಬ್ಬರೂ ತಮ್ಮ ಶ್ರೇಷ್ಠ ಆಟದ ಮೂಲಕ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಇವರು ಇಬ್ಬರೂ ಐಪಿಎಲ್‌ನಲ್ಲಿ ತಮ್ಮ ಅದ್ಭುತ ಪ್ರದರ್ಶನದಿಂದ ಗಮನ ಸೆಳೆದಿದ್ದರು. ವೈಭವ್ ಸೂರ್ಯವಂಶಿ ರಾಜಸ್ಥಾನ್ ರಾಯಲ್ಸ್ ಪರ ಹಾಗೂ ಪ್ರಿಯಾಂಶ್ ಆರ್ಯ ಪಂಜಾಬ್ ಕಿಂಗ್ಸ್ ಪರ ಆಡಿದ್ದರು. ಇವರ ಜೊತೆಗೆ ನೆಹಾಲ್ ವಧೇರಾ, ಸೂರ್ಯಾಂಶ್ ಶೆಡ್ಗೆ, ರಮಣದೀಪ್ ಸಿಂಗ್, ಅಶುತೋಷ್ ಶರ್ಮಾ ಮತ್ತು ಆಲ್‌ರೌಂಡರ್ ಹರ್ಷ್ ದುಬೆ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಕನ್ನಡದ ಯುವ ವೇಗಿ ವಿಜಯಕುಮಾರ್ ವೈಶಾಕ್‌ಗೂ ಅವಕಾಶ ದೊರೆತಿದೆ. ಅವರ ಜೊತೆಗೆ ಯಶ್ ಠಾಕೂರ್, ಸುಯಶ್ ಶರ್ಮಾ ಹಾಗೂ ಗುರ್ಜಪ್‌ನೀತ್ ಸಿಂಗ್ ಬೌಲಿಂಗ್ ಶಕ್ತಿಯನ್ನು ಹೆಚ್ಚಿಸಲಿದ್ದಾರೆ. ತಂಡದಲ್ಲಿ ಅಭಿಷೇಕ್ ಪೊರೆಲ್ ಎರಡನೇ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ.

ಭಾರತ ಎ ತಂಡ: ಜಿತೇಶ್ ಶರ್ಮಾ (ನಾಯಕ), ನಮನ್ ಧೀರ್ (ಉಪನಾಯಕ), ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ನೆಹಾಲ್ ವಧೇರಾ, ಸೂರ್ಯಾಂಶ್ ಶೆಡ್ಗೆ, ರಮಣದೀಪ್ ಸಿಂಗ್, ಅಭಿಷೇಕ್ ಪೊರೆಲ್, ಹರ್ಷ್ ದುಬೆ, ಅಶುತೋಷ್ ಶರ್ಮಾ, ಯಶ್ ಠಾಕೂರ್, ಗುರ್ಜಪ್‌ನೀತ್ ಸಿಂಗ್, ಸುಯಶ್ ಶರ್ಮಾ, ವಿಜಯಕುಮಾರ್ ವೈಶಾಕ್, ಯಧುವೀರ್ ಸಿಂಗ್ ಚರಕ್.

ಮೀಸಲು ಆಟಗಾರರು: ಶೇಖ್ ರಶೀದ್, ಗುರ್ನೂರ್ ಸಿಂಗ್ ಬ್ರಾರ್, ಕುಮಾರ್ ಕುಶಾಗ್ರಾ, ತನುಷ್ ಕೋಟ್ಯಾನ್ ಮತ್ತು ಸಮೀರ್ ರಿಝ್ವಿ.

error: Content is protected !!