Thursday, November 6, 2025

ಕೇಂದ್ರ ಸಚಿವ ಲಲನ್ ಸಿಂಗ್ ವಿರುದ್ಧ ಕೇಸ್ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರದ ಮೊಕಾಮಾದಲ್ಲಿ ಮತದಾನದ ದಿನದಂದು ಜೆಡಿಯು ಕಾರ್ಯಕರ್ತರು ವಿರೋಧ ಪಕ್ಷದ ನಾಯಕರನ್ನು ಅವರ ಮನೆಗಳೊಳಗೆ ಬಂಧಿಸಬೇಕು ಎಂದು ಕೇಂದ್ರ ಸಚಿವ ಮತ್ತು ಹಿರಿಯ ಜೆಡಿಯು ನಾಯಕ ಲಲನ್ ಸಿಂಗ್ ನೀಡಿದ್ದ ಹೇಳಿಕೆ ವಿರೋಧಕ್ಕೆ ಕಾರಣವಾಗಿದ್ದು, ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಕೇಸ್ ದಾಖಲಿಸಲಾಗಿದೆ.

ಜನ್ ಸುರಾಜ್ ಬೆಂಬಲಿಗ ದುಲಾರ್ ಚಂದ್ ಯಾದವ್ ಅವರ ಹತ್ಯೆಗೆ ಸಂಬಂಧಿಸಿದಂತೆ ಪ್ರಸ್ತುತ ಪಾಟ್ನಾದ ಬೇಯೂರ್ ಜೈಲಿನಲ್ಲಿರುವ ಜೆಡಿಯು ಅಭ್ಯರ್ಥಿ ಅನಂತ್ ಸಿಂಗ್ ಪರ ಲಲನ್ ವಾರ ಮೊಕಾಮಾದಲ್ಲಿ ಪ್ರಚಾರ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸಚಿವರು ಮತದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರತಿಪಕ್ಷಗಳ ನಾಯಕರು ಆರೋಪಿಸಿದ್ದಾರೆ.

‘ಇಲ್ಲಿ ಕೆಲವು ನಾಯಕರಿದ್ದಾರೆ, ಮತದಾನದ ದಿನದಂದು ಅವರನ್ನು ಮನೆಯಿಂದ ಹೊರಗೆ ಹೋಗಲು ಬಿಡಬೇಡಿ. ಅವರನ್ನು ಒಳಗೆ ಲಾಕ್ ಮಾಡಿ. ಅವರು ಹೆಚ್ಚು ಗಲಾಟೆ ಮಾಡಿದರೆ ಅವರನ್ನು ಕರೆದುಕೊಂಡು ಹೋಗಿ ಮತ ಚಲಾಯಿಸಲು ಬಿಡಿ. ಅದಾದ ನಂತರ ಮನೆಗೆ ಹೋಗಿ ವಿಶ್ರಾಂತಿ ಪಡೆಯಲು ಹೇಳಿ’ ಎಂದು ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ.

ಈ ಘಟನೆಯಿಂದ ರಾಜಕೀಯ ಬಿರುಗಾಳಿ ಎದ್ದಿದೆ. ಆರ್‌ಜೆಡಿ ಮತ್ತು ಇತರ ವಿರೋಧ ಪಕ್ಷಗಳು ಸಚಿವ ಲಲನ್ ಸಿಂಗ್ ಮತದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ ಮತ್ತು ಚುನಾವಣಾ ಆಯೋಗದ ಅಧಿಕಾರವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಆರೋಪಿಸಿವೆ.

error: Content is protected !!