ಹೂವುಗಳು ಕೇವಲ ಸೌಂದರ್ಯಕ್ಕೆ ಮಾತ್ರವಲ್ಲ, ಆಧ್ಯಾತ್ಮಿಕ ಮತ್ತು ಶಕ್ತಿಯ ಚಿಹ್ನೆಯೂ ಆಗಿವೆ ಎಂದು ವಾಸ್ತು ಶಾಸ್ತ್ರಗಳು ಹೇಳುತ್ತವೆ. ಕೆಲವು ಹೂಗಳು ನಿರ್ದಿಷ್ಟ ದೇವತೆಗಳಿಗೆ ಪ್ರಿಯವಾಗಿದ್ದು, ಅವುಗಳನ್ನು ಪೂಜೆಯಲ್ಲಿ ಬಳಸುವುದರಿಂದ ಅಶೀರ್ವಾದ ದೊರೆಯುತ್ತದೆ ಎನ್ನುವುದು ನಂಬಿಕೆ. ಅದರಲ್ಲೂ ದಾಸವಾಳದ ಹೂವು (Hibiscus) ವಿಶಿಷ್ಟ ಸ್ಥಾನ ಹೊಂದಿದೆ. ನೈಸರ್ಗಿಕವಾಗಿ ಸುಂದರವಾದ ಈ ಹೂವು ಔಷಧೀಯ ಗುಣಗಳಿಂದ ಕೂಡಿದ್ದು, ಮನೆಯಲ್ಲಿ ಈ ಗಿಡವನ್ನು ಬೆಳೆಸುವುದರಿಂದ ಆರ್ಥಿಕ, ಆಧ್ಯಾತ್ಮಿಕ ಹಾಗೂ ಮಾನಸಿಕ ಪ್ರಯೋಜನಗಳು ದೊರೆಯುತ್ತವೆ ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ.
- ಲಕ್ಷ್ಮಿ ದೇವಿಯ ಆಶೀರ್ವಾದ: ವಾಸ್ತು ಪ್ರಕಾರ, ಮನೆಯಲ್ಲಿ ದಾಸವಾಳ ಗಿಡವನ್ನು ಬೆಳೆಸುವುದು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಅತ್ಯಂತ ಶುಭ ಎಂದು ನಂಬಲಾಗಿದೆ. ಆದರೆ ಈ ಗಿಡ ಒಣಗದಂತೆ ಸದಾ ಕಾಳಜಿಯಿಂದ ಬೆಳೆಸಬೇಕು. ಸಂಪತ್ತಿನ ದೇವತೆ ಲಕ್ಷ್ಮಿಗೆ ದಾಸವಾಳ ಅತ್ಯಂತ ಪ್ರಿಯವಾದ ಹೂವಾಗಿದ್ದು, ಇದು ಮನೆಗೆ ಆರ್ಥಿಕ ಸಮೃದ್ಧಿ ಮತ್ತು ಧನ ಭಾಗ್ಯ ತರಲು ಸಹಾಯಕ.
- ದಾಸವಾಳ ಹೂವುಗಳ ಪೂಜಾ ಪ್ರಯೋಜನ: ದಾಸವಾಳ ಹೂವು ಸಾಲದಲ್ಲಿ ಸಿಲುಕಿರುವವರಿಗೂ, ಆರ್ಥಿಕ ಸಂಕಷ್ಟದಲ್ಲಿರುವವರಿಗೂ ಶಾಂತಿ ಮತ್ತು ಪರಿಹಾರ ನೀಡುತ್ತದೆ. ಮನೆಯಲ್ಲಿ ಹಣವನ್ನು ಇಡುವ ಸ್ಥಳದಲ್ಲಿ, ದಾಸವಾಳದ ಹೂವನ್ನು ಇಟ್ಟು ಗಣೇಶ ಹಾಗೂ ದುರ್ಗಾ ದೇವಿಯ ಪೂಜೆ ಮಾಡಿದರೆ ಲಾಭ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.
- ಕುಟುಂಬ ಶಾಂತಿಗೆ ದಾಸವಾಳದ ಪ್ರಭಾವ: ಮನೆಯಲ್ಲಿ ಜಗಳ, ಘರ್ಷಣೆ ಅಥವಾ ವಾಸ್ತು ದೋಷ ಇದ್ದಲ್ಲಿ, ಮಲಗುವ ಮೊದಲು ದಿಂಬಿನ ಕೆಳಗೆ ದಾಸವಾಳದ ಹೂವನ್ನು ಇಡುವುದು ಮನಸ್ಸಿಗೆ ಶಾಂತಿಯನ್ನು ತರುತ್ತದೆ ಎಂದು ಹೇಳಲಾಗಿದೆ.
- ಮನೆಯಲ್ಲಿ ದಾಸವಾಳ ಗಿಡದ ಸೌಂದರ್ಯ ಮತ್ತು ವಾತಾವರಣ: ದಾಸವಾಳ ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ಕೇವಲ ಆಧ್ಯಾತ್ಮಿಕ ಲಾಭವಲ್ಲ, ಮನೆ ಸೌಂದರ್ಯವೂ ಹೆಚ್ಚುತ್ತದೆ. ಈ ಗಿಡವು ವಾತಾವರಣವನ್ನು ತಾಜಾಗೊಳಿಸಿ, ಮನೆಯಲ್ಲಿ ಶಾಂತಿ, ಉತ್ಸಾಹ ಮತ್ತು ಪಾಸಿಟಿವ್ ಎನರ್ಜಿ ತರಲು ಸಹಕಾರಿಯಾಗುತ್ತದೆ.
ದಾಸವಾಳದ ಹೂವಿನ ಸೌಂದರ್ಯವನ್ನು ಕೇವಲ ಅಲಂಕಾರಕ್ಕಾಗಿ ನೋಡಬೇಡಿ. ಇದು ಶಕ್ತಿ, ಶಾಂತಿ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಈ ಪವಿತ್ರ ಗಿಡವನ್ನು ಮನೆಯ ಮುಂಭಾಗದಲ್ಲಿ ಬೆಳೆಸುವುದರಿಂದ ದೇವರ ಕೃಪೆಯ ಜೊತೆಗೆ ಮನಸ್ಸಿಗೂ ನೆಮ್ಮದಿ ದೊರೆಯುತ್ತದೆ.

