Thursday, November 6, 2025

ಮಂಗೋಲಿಯಾದಲ್ಲಿ ಸಿಲುಕಿದ್ದ 228 ಪ್ರಯಾಣಿಕರು ವಾಪಾಸ್ ದೆಹಲಿಗೆ: ವಿಶೇಷ ವಿಮಾನದಲ್ಲಿ ಬಂದಿಳಿದ ಪ್ಯಾಸೆಂಜರ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಗೋಲಿಯಾದ ರಾಜಧಾನಿ ಉಲಾನ್‌ಬಾಟರ್‌ನಲ್ಲಿ ಸಿಲುಕಿಕೊಂಡಿದ್ದ 228 ಪ್ರಯಾಣಿಕರು ಏರ್ ಇಂಡಿಯಾ ವಿಶೇಷ ವಿಮಾನದ ಮೂಲಕ ಬುಧವಾರ ಬೆಳಿಗ್ಗೆ ದೆಹಲಿಗೆ ಬಂದಿಳಿದಿದ್ದಾರೆ.

ಸೋಮವಾರ ತಾಂತ್ರಿಕ ಸಮಸ್ಯೆಯ ಕಾರಣದಿಂದ ಸಾನ್‌ಫ್ರಾನ್ಸಿಸ್ಕೊ–ದೆಹಲಿ ವಿಮಾನವನ್ನು ಉಲಾನ್‌ಬಾಟರ್‌ಗೆ ತಿರುಗಿಸಲಾಗಿತ್ತು. ಇದರಿಂದ ಪ್ರಯಾಣಿಕರು ಅಲ್ಲಿ ಸಿಲುಕಿಕೊಂಡಿದ್ದರು.

ಏರ್ ಇಂಡಿಯಾ ಅಧಿಕಾರಿಯೊಬ್ಬರ ಪ್ರಕಾರ, ಉಲಾನ್‌ಬಾಟರ್‌ನಿಂದ ಪ್ರಯಾಣಿಕರನ್ನು ಕರೆದುಕೊಂಡು ಬಂದ ವಿಮಾನವು ಬುಧವಾರ ಬೆಳಿಗ್ಗೆ ಸುಮಾರು 8.24 ಗಂಟೆಗೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ.

error: Content is protected !!