ಸಂಸಾರ ಅಂದ್ರೆ ಕೇವಲ ಇಬ್ಬರ ಬದುಕು ಅಲ್ಲ, ಅದು ಭಾವನೆಗಳ, ನಂಬಿಕೆಯ ಮತ್ತು ತಾಳ್ಮೆಯ ಅಡಿಪಾಯದ ಮೇಲೆ ನಿಂತಿರುವ ಒಂದು ಬಂಧ. ಯಾವ ಸಂಬಂಧವಾಗಿರಲಿ ಅಲ್ಲಿ ಒಂದು ಮಾತು ಬರುತ್ತದೆ, ಒಂದು ಮಾತು ಹೋಗುತ್ತದೆ. ಅದನ್ನೇ ದೊಡ್ಡದಾಗಿ ಮಾಡುತ್ತಿದ್ದರೆ ಒಟ್ಟಿಗೆ ಬದುಕುವುದು ಕಷ್ಟ. ಆದರೆ ಈ ಸಣ್ಣ ಸಣ್ಣ ವಿಷಯಗಳ ಬಗ್ಗೆ ಗಮನಕೊಟ್ಟರೆ ದಾಂಪತ್ಯ ಜೀವನವು ಸುಂದರವಾಗುತ್ತದೆ.
- ಶಾಂತವಾಗಿ ಪ್ರತಿಕ್ರಿಯಿಸುವ ಅಭ್ಯಾಸ ಬೆಳೆಸಿಕೊಳ್ಳಿ: ಸಂಗಾತಿಯ ಮಾತು ಕೆಲವೊಮ್ಮೆ ಕಿರಿಕಿರಿಯಾಗಬಹುದು. ಆದರೆ ಆ ಕ್ಷಣದಲ್ಲಿ ಕೋಪದಿಂದ ಪ್ರತಿಕ್ರಿಯಿಸದೆ ಶಾಂತವಾಗಿ ಉತ್ತರ ನೀಡುವುದು ಒಳ್ಳೆಯದು. ಸಿಟ್ಟು ಮಾಡಿಕೊಂಡರೆ ಕ್ಷಣದ ನಂತರ ಪಶ್ಚಾತ್ತಾಪ ಮಾತ್ರ ಉಳಿಯುತ್ತದೆ. ಶಾಂತ ಮನಸ್ಸು ಸಂಬಂಧವನ್ನು ಗಟ್ಟಿಯಾಗಿಸುತ್ತದೆ.
- ಮಾತಿಗಿಂತ ಹೆಚ್ಚು ಆಲಿಸುವ ಕಲೆ ಕಲಿಯಿರಿ: ಸಂಬಂಧದಲ್ಲಿ “ಆಲಿಸುವುದು” ಅತ್ಯಂತ ಮುಖ್ಯ. ಸಂಗಾತಿಯು ಮಾತನಾಡಿದಾಗ ಗಮನದಿಂದ ಆಲಿಸುವುದು ಅರ್ಥಭೇದಗಳನ್ನು ತಪ್ಪಿಸುತ್ತದೆ. ಕೆಲವೊಮ್ಮೆ ಎದುರಿನವರ ಮಾತುಗಳಿಗೆ ಕಿವಿಗೊಡುವುದೇ ಅವರ ಮನಸ್ಸನ್ನು ಗೆಲ್ಲುವ ಸೌಮ್ಯ ಮಾರ್ಗವಾಗುತ್ತದೆ.
- ಸಿಹಿಯಾದ ಮಾತುಗಳು ಪ್ರೀತಿಯ ದಾರಿಯನ್ನು ತೆರೆಯುತ್ತವೆ: ಸಂಬಂಧದಲ್ಲಿ ಸಿಹಿಯಾದ ಮಾತುಕತೆ ಅತ್ಯಗತ್ಯ. ನಕಾರಾತ್ಮಕ ಶಬ್ದಗಳು ನೋವು ತರುತ್ತವೆ, ಆದರೆ ಪ್ರೀತಿಯಿಂದ ಮಾತಾಡಿದರೆ ಮನಸ್ಸು ಹಿತವಾಗುತ್ತದೆ. ಪ್ರತಿದಿನವೂ ಹೃದಯದಿಂದ ಮಾತನಾಡುವುದು ಪ್ರೀತಿಯ ಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ.
- ನಂಬಿಕೆ ಎಂಬ ಸೇತುವೆ ಗಟ್ಟಿಯಾಗಿರಲಿ: ನಂಬಿಕೆ ಇಲ್ಲದ ಸಂಬಂಧ ಹೆಚ್ಚು ದಿನ ಉಳಿಯದು. ಪತಿ–ಪತ್ನಿಯರಿಬ್ಬರೂ ಪರಸ್ಪರ ನಂಬಿಕೆ ಇಟ್ಟು, ಗೌರವದಿಂದ ವರ್ತಿಸುವುದು ತುಂಬಾ ಮುಖ್ಯ. ನಂಬಿಕೆ ಬಲವಾದರೆ ಅಂತರಂಗದ ಬಂಧ ಮತ್ತಷ್ಟು ಗಟ್ಟಿಯಾಗುತ್ತದೆ.
- ಆರ್ಥಿಕ ವಿಚಾರಗಳಲ್ಲಿ ಸ್ಪಷ್ಟತೆ ಇರಲಿ: ಹಣದ ವಿಚಾರವು ಅನೇಕರ ಜೀವನದಲ್ಲಿ ಅಸಮಾಧಾನಕ್ಕೆ ಕಾರಣವಾಗುತ್ತದೆ. ಇಬ್ಬರೂ ಪರಸ್ಪರ ಚರ್ಚೆ ಮಾಡಿ, ಖರ್ಚು ಮತ್ತು ಜವಾಬ್ದಾರಿಗಳನ್ನು ಹಂಚಿಕೊಳ್ಳಬೇಕು. ಇದು ದಾಂಪತ್ಯ ಜೀವನದ ಒತ್ತಡವನ್ನು ಕಡಿಮೆ ಮಾಡಿ ಸಂತೋಷವನ್ನು ಹೆಚ್ಚಿಸುತ್ತದೆ.
ಒಟ್ಟಿನಲ್ಲಿ, ದಾಂಪತ್ಯ ಜೀವನವು ಕೇವಲ ಒಟ್ಟಿಗೆ ಇರುವುದಲ್ಲ. ಅದು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ, ಪ್ರೀತಿಸುವ ಮತ್ತು ಬೆಂಬಲಿಸುವ ಪ್ರಯಾಣ.

