Wednesday, November 5, 2025

Travel | ಚಳಿಗಾಲ ಬಂದೇಬಿಡ್ತು: ಡಿಸೆಂಬರ್ ನಲ್ಲಿ ಟ್ರಿಪ್ ಹೋಗೋಕೆ ಬೆಸ್ಟ್ ಪ್ಲೇಸ್ ಇಲ್ಲಿದೆ ನೋಡಿ

ಚಳಿಗಾಲದ ಟ್ರಿಪ್ ಗೆ ಹೇಳಿಮಾಡಿಸಿದ ತಿಂಗಳು ಅಂದ್ರೆ ಅದು ಡಿಸೆಂಬರ್. ಪ್ರವಾಸ ಪ್ರಿಯರ ಕನಸಿನ ಸಮಯ. ಚಳಿಗಾಳಿ, ಹಬ್ಬದ ವಾತಾವರಣ ಮತ್ತು ಹೊಸ ವರ್ಷಕ್ಕೆ ಮುನ್ನದ ಸೀಸನ್ – ಈ ಎಲ್ಲಾ ಸಂಗತಿಗಳು ಸೇರಿ ಭಾರತದೆಲ್ಲೆಡೆ ಟ್ರಾವೆಲ್ ಅನ್ನೋ ಹಬ್ಬದ ಸಂಭ್ರಮ ಮೂಡಿಸುತ್ತವೆ. ಆದರೆ ಎಲ್ಲರಿಗೂ ಲಕ್ಸುರಿ ಪ್ರವಾಸ ಸಾಧ್ಯವಾಗೋದಿಲ್ಲ. ಅಂಥವರಿಗೆ ಭಾರತದಲ್ಲೇ ಅನೇಕ ಅಫೋರ್ಡಬಲ್ (ಕಮ್ಮಿ ವೆಚ್ಚದ) ಹಾಗೂ ಅದ್ಭುತ ಅನುಭವ ನೀಡುವ ಸ್ಥಳಗಳಿವೆ. ಈ ಚಳಿಗಾಲದ ಡಿಸೆಂಬರ್‌ನಲ್ಲಿ ಭೇಟಿ ನೀಡಬಹುದಾದ ಅಂಥ 5 ಅತ್ಯುತ್ತಮ ತಾಣಗಳ ಪರಿಚಯ ಇಲ್ಲಿದೆ.

  • ಶಿಮ್ಲಾ – ಹಿಮಾಚಲದ ರಾಣಿ: ಚಳಿಗಾಲದಲ್ಲಿ ಶಿಮ್ಲಾದಲ್ಲಿ ಬಿಳಿ ಹಿಮದ ಹೊದಿಕೆಯು ಸಂಪೂರ್ಣ ಪಟ್ಟಣವನ್ನು ಆವರಿಸುತ್ತದೆ. ಹಿಮಪಾತದ ದೃಶ್ಯ, ಟಾಯ್ ಟ್ರೈನ್ ಸವಾರಿ ಮತ್ತು ಮಾಲ್ ರೋಡ್ ಶಾಪಿಂಗ್ ಶಿಮ್ಲಾ ಟ್ರಿಪ್‌ನ್ನು ಸ್ಮರಣೀಯವಾಗಿಸುತ್ತದೆ.
  • ಮನಾಲಿ – ಸಾಹಸ ಪ್ರಿಯರ ಚಳಿ ಪ್ರಪಂಚ: ಸ್ಕೀಯಿಂಗ್, ಪ್ಯಾರಾಗ್ಲೈಡಿಂಗ್ ಮತ್ತು ಹಿಮದ ಆಟಗಳಿಗೆ ಮನಾಲಿ ಹಾಟ್ ಸ್ಪಾಟ್. ರೋಹ್ತಾಂಗ್ ಪಾಸ್ ಹಾಗೂ ಸೋಲಾಂಗ್ ವ್ಯಾಲಿಯ ನೈಸರ್ಗಿಕ ಸೌಂದರ್ಯ ಮನಸೋರೆ ಮಾಡುತ್ತದೆ. ಬಜೆಟ್ ಟ್ರಾವೆಲ್ಲರ್ಸ್‌ಗೂ ಇದು ಒಳ್ಳೆಯ ಆಯ್ಕೆ.
  • ದಾರ್ಜಿಲಿಂಗ್ – ಚಹಾ ತೋಟಗಳ ಚಳಿಗಾಲದ ಸೊಗಸು: ಪಶ್ಚಿಮ ಬಂಗಾಳದ ದಾರ್ಜಿಲಿಂಗ್‌ನಲ್ಲಿ ಹಿಮಾಲಯದ ನೋಟ ಮತ್ತು ಚಹಾ ತೋಟಗಳ ನಡುವೆ ಕಾಫಿಯ ಕಪ್ ಹಿಡಿದು ಬೆಳಗಿನ ಸೂರ್ಯೋದಯ ನೋಡುವುದು ಅದ್ಭುತ ಅನುಭವ. ಟೈಗರ್ ಹಿಲ್‌ನಿಂದ ಕಾಣುವ ಸೂರ್ಯೋದಯದ ದೃಶ್ಯ ನೋಡಿ ಮೋಹಿತರಾಗುತ್ತೀರಿ ಖಂಡಿತ.
  • ಗ್ಯಾಂಗ್ಟಾಕ್ – ಸಿಕ್ಕಿಂನ ಶಾಂತ ಪರ್ವತ ನಗರ: ಚಳಿಗಾಲದಲ್ಲಿ ಗ್ಯಾಂಗ್ಟಾಕ್‌ ಹಿಮದಿಂದ ಆವೃತವಾಗಿರುತ್ತದೆ. ತ್ಸೋಂಗೋ ಸರೋವರ, ನಾಥುಲಾ ಪಾಸ್ ಮತ್ತು ಬೌದ್ಧ ದೇವಾಲವಗಳ ಸುತ್ತಾಟ ಮನಸ್ಸಿಗೆ ಶಾಂತಿ ನೀಡುತ್ತದೆ. ಟ್ರೆಕ್ಕಿಂಗ್ ಪ್ರಿಯರಿಗೆ ಇದು ಪರ್ಫೆಕ್ಟ್ ಸ್ಥಳ.
  • ಊಟಿ – ದಕ್ಷಿಣ ಭಾರತದ ಸ್ವರ್ಗ: ತಮಿಳುನಾಡಿನ ನೀಲಗಿರಿ ಬೆಟ್ಟಗಳ ಮಧ್ಯೆ ಇರುವ ಊಟಿ, ಚಳಿಗಾಲದಲ್ಲಿ ಮಂಜು ಮುಸುಕಿದ ದೃಶ್ಯಗಳಿಂದ ಮನಸ್ಸು ಗೆಲ್ಲುತ್ತದೆ. ಬೋಟಾನಿಕಲ್ ಗಾರ್ಡನ್, ಊಟಿ ಲೇಕ್ ಮತ್ತು ರೈಲು ಸವಾರಿ – ಇದು ಫ್ಯಾಮಿಲಿ ಟ್ರಿಪ್‌ಗಾಗಿ ಸೂಕ್ತ ಆಯ್ಕೆ.
error: Content is protected !!