Saturday, November 8, 2025

Travel | ದೇವರ ನಾಡಿನ ಅದ್ಭುತ ತಾಣಗಳು ಇಲ್ಲಿವೆ ನೋಡಿ

ದಕ್ಷಿಣ ಭಾರತದ ಅತ್ಯಂತ ಸುಂದರ ರಾಜ್ಯವೆಂದರೆ ಕೇರಳ. ಹಸಿರಿನ ಪ್ರಕೃತಿ, ಮಂಜನ್ನು ಹೊದ್ದ ಪರ್ವತಗಳು, ಶಾಂತವಾದ ಬ್ಯಾಕ್‌ವಾಟರ್‌ಗಳು, ಸುಂದರ ಕಡಲತೀರಗಳು ಮತ್ತು ಸಂಸ್ಕೃತಿಯ ವೈವಿಧ್ಯದಿಂದ ಕೇರಳ ನಿಜಕ್ಕೂ “ಗಾಡ್ಸ್ ಓನ್ ಕಂಟ್ರಿ” ಎಂದೆನಿಸಿದೆ. ಇಲ್ಲಿವೆ ಕೇರಳದ ಅತ್ಯುತ್ತಮ ಪ್ರವಾಸಿ ತಾಣಗಳು

ಅಲೆಪ್ಪಿ (Alleppey) – ದಿ ವೆನಿಸ್ ಆಫ್ ದಿ ಈಸ್ಟ್

ನೀರಿನ ಮೇಲೆ ತೇಲುವ ಹೌಸ್‌ಬೋಟ್‌ಗಳು, ತೆಂಗಿನ ಮರಗಳ ಸಾಲು, ಶಾಂತವಾದ ಬ್ಯಾಕ್‌ವಾಟರ್‌ಗಳು—ಇವೆಲ್ಲ ಅಲೆಪ್ಪಿಯ ವಿಶೇಷತೆ. ಇಲ್ಲಿ ಹೌಸ್‌ಬೋಟ್‌ನಲ್ಲಿ ಪ್ರಯಾಣಿಸಿ ಕೇರಳದ ಗ್ರಾಮೀಣ ಜೀವನವನ್ನು ಕಣ್ಣಾರೆ ನೋಡಬಹುದು.

ಮುನ್ನಾರ್ (Munnar) – ಚಹಾ ತೋಟಗಳ ಸ್ವರ್ಗ:

ಹಸಿರಿನ ಪರ್ವತಗಳಲ್ಲಿ ನೆಲೆಗೊಂಡಿರುವ ಮುನ್ನಾರ್, ಚಹಾ ತೋಟಗಳು, ಜಲಪಾತಗಳು ಮತ್ತು ತಂಪಾದ ವಾತಾವರಣದಿಂದ ಹೆಸರುವಾಸಿ. ಹನಿಮೂನ್‌ಗೆ ಇದು ಪರಿಪೂರ್ಣ ತಾಣ. ಇಲ್ಲಿನ ಎರವಿಕುಳಂ ನ್ಯಾಷನಲ್ ಪಾರ್ಕ್ ಮತ್ತು ಮಟ್ಟುಪೆಟ್ಟಿ ಡ್ಯಾಂ ನೋಡಲೇಬೇಕು.

ತೆಕ್ಕಡಿ (Thekkady) – ವನ್ಯಜೀವಿ ಮತ್ತು ಮಸಾಲೆಗಳ ನೆಲ:

ಪೆರಿಯಾರ್ ವನ್ಯಜೀವಿ ಅಭಯಾರಣ್ಯದಿಂದ ಪ್ರಸಿದ್ಧವಾದ ತೆಕ್ಕಡಿಯಲ್ಲಿ ಬೋಟ್ ಸಫಾರಿ, ಆನೆ ಸವಾರಿ ಮತ್ತು ಮಸಾಲೆ ತೋಟಗಳ ಭೇಟಿಯ ಅನುಭವ ಸಿಗುತ್ತದೆ. ಪ್ರಕೃತಿ ಪ್ರಿಯರಿಗೆ ಇದು ಸೂಕ್ತ ತಾಣ.

ಕೋವಲಂ (Kovalam) – ಅಲೆಗಳ ಮಧ್ಯದ ಸೂರ್ಯೋದಯ

ಕೊವಳಂ ಕಡಲತೀರವು ಕೇರಳದ ಅತ್ಯಂತ ಜನಪ್ರಿಯ ಬೀಚ್‌ಗಳಲ್ಲಿ ಒಂದು. ಇಲ್ಲಿ ಸರ್ಫಿಂಗ್‌, ಸನ್‌ಬಾತಿಂಗ್‌ ಮತ್ತು ಮಸಾಜ್‌ ಸ್ಪಾ ಅನುಭವಿಸಬಹುದು. ಸಂಜೆ ಸಮಯದಲ್ಲಿ ಸೂರ್ಯಾಸ್ತದ ದೃಶ್ಯ ಅತೀ ಮನಮೋಹಕ.

ವಯನಾಡ್‌ (Wayanad) – ಪ್ರಕೃತಿಯ ತಾಣ

ಹಸಿರಿನಿಂದ ಆವೃತವಾದ ವಯನಾಡ್‌ ಪರ್ವತ ಪ್ರದೇಶವು ಜಲಪಾತಗಳು, ಗುಹೆಗಳು, ಕಾಫಿ ತೋಟಗಳು ಮತ್ತು ವನ್ಯಜೀವಿಗಳಿಂದ ಸಮೃದ್ಧವಾಗಿದೆ. ಎಡಕ್ಕಲ್‌ ಗುಹೆ ಮತ್ತು ಪುಕ್ಕೋಡೆ ಸರೋವರ ಇಲ್ಲಿ ಮುಖ್ಯ ಆಕರ್ಷಣೆ.

error: Content is protected !!