ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ರಸ್ತೆ ಬಗ್ಗೆ ದಿನಕ್ಕೊಂದು ಪೋಸ್ಟ್ಗಳು ವೈರಲ್ ಆಗುತ್ತ ಇದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದು ವೈರಲ್ ಆಗಿದೆ.
ನಗರದ ನಿವಾಸಿಯೊಬ್ಬರು ಬೆಂಗಳೂರಿನ ರಸ್ತೆ ಗುಂಡಿಗಳಿಂದ ತಮ್ಮ ಕಾರನ್ನು ರಿಪೇರಿ ಮಾಡಲು 23 ಸಾವಿರ ರೂ. ಖರ್ಚಾಗಿದೆ ಎಂದು ಪೋಸ್ಟ್ನ್ನು ಹಂಚಿಕೊಂಡಿದ್ದಾರೆ. ಇದೀಗ ಈ ಸ್ಟೋರಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಕಾರಣವಾಗಿದೆ.
ಕಾರು ಸರ್ವಿಸ್ ಮಾಡಿದ ಕೇವಲ ಒಂದು ವಾರದ ನಂತರ ಗುಂಡಿಗಳಿಂದ ಮತ್ತೆ ಕಾರು ರಿಪೇರಿಗೆ ಬಂದಿದೆ. ಕಾರು ರಿಪೇರಿ ಮಾಡಲು 23 ಸಾವಿರ ರೂ. ಖರ್ಚು ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ರೆಡ್ಡಿಟ್ ಪೋಸ್ಟ್ ವೈರಲ್ ಆಗಿದೆ .
ಕಾರಿನ ಸಸ್ಪೆನ್ಷನ್ ಅನ್ನು ಬದಲಾಯಿಸಲು ಹಾಗೂ ಕಾರು ಕಂಡೀಷನ್ಗೆ ಬರಲು 23 ಸಾವಿರ ರೂ. ಖರ್ಚು ಮಾಡಲಾಗಿದೆ ಎಂದು ಹೇಳಿದ್ದಾರೆ.
ಪ್ರತಿ ದಿನ ಔಟರ್ ರಿಂಗ್ ರಸ್ತೆ ಮತ್ತು ವರ್ತೂರು ರಸ್ತೆಯಾಗಿ ಪ್ರಯಾಣಿಸುತ್ತೇನೆ. ಅಲ್ಲಿರುವ ಗುಂಡಿಗಳಿಂದ ಕಾರು ಸಂಪೂರ್ಣ ಹಾಳಾಗಿದೆ. ಇದರ ಜತೆಗೆ ಎಕ್ಸಾಸ್ಟ್ ಪೈಪ್ಗೂ ಹಾನಿಯಾಗಿದೆ. ಇದಕ್ಕೆ 5 ಸಾವಿರ ರೂ. ಖರ್ಚು ಮಾಡಿದ್ದೇನೆ. ಬೇಕಾದರೆ ರಸ್ತೆ ರಿಪೇರಿ ಮಾಡಲು ಹಣ ನೀಡುತ್ತೇನೆ. ಆದರೆ ಯಾವುದೇ ತೆರಿಗೆ ಕಟ್ಟುವುದಿಲ್ಲ ಎಂದು ಹೇಳಿದ್ದಾರೆ.
ಗುಂಡಿ ಮುಚ್ಚೋಕೆ ನಾನೇ ದುಡ್ಡು ಕೊಡ್ತೀನಿ, ಪ್ಲೀಸ್ ರಸ್ತೆ ಸರಿ ಮಾಡಿ ಎಂದ ನಿವಾಸಿ

