Monday, September 22, 2025

ಮಾರ್ಕೆಟ್ ನಲ್ಲಿ ಏಲಕ್ಕಿ ಬಾಳೆಹಣ್ಣಿಗೆ ಭಾರೀ ಡಿಮ್ಯಾಂಡ್: ರೈತರಲ್ಲಿ ಹರ್ಷ, ಗ್ರಾಹಕರ ಜೇಬಿಗೆ ಕತ್ತರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಷಾಢ ಮಾಸ ಕಳೆದು ಶ್ರಾವಣ ಮಾಸ ಬಂದಿದೆ. ಮುಂದೆ ಸಾಲು ಸಾಲು ಹಬ್ಬಗಳ ಸರದಿ. ಅದ್ರಲ್ಲೂ ಹೂ ಹಣ್ಣು ಕಾಯಿಗೆ ಭಾರೀ ಡಿಮ್ಯಾಂಡ್ ಹೆಚ್ಚಾಗಿದೆ.

ಇದ್ರಿಂದ ಈಗಲೇ ಮಾರುಕಟ್ಟೆಯಲ್ಲಿ ಏಲಕ್ಕಿ ಬಾಳೆಹಣ್ಣು ದರ ಹೆಚ್ಚಾಗಿದೆ. ಏಲಕ್ಕಿ ಬಾಳೆಹಣ್ಣಿಗೆ ಭಾರೀ ಡಿಮ್ಯಾಂಡ್ ಬಂದಿದೆ. ಆಷಾಢ ಮಾಸದಲ್ಲಿ ಕೆಜಿ ಏಲಕ್ಕಿ ಬಾಳೆಹಣ್ಣಿಗೆ 30 ರಿಂದ 40 ರೂಪಾಯಿ ಬೆಲೆಯಿತ್ತು. ಆದ್ರೆ ಶ್ರಾವಣ ಆರಂಭವಾಗುತ್ತಿದ್ದಂತೆ ಕೆಜಿ ಏಲಕ್ಕಿ ಬಾಳೆಹಣ್ಣು 100 ರಿಂದ 130 ರೂಪಾಯಿಯವರೆಗೂ ಏರಿಕೆಯಾಗಿದೆ.

ಏಲಕ್ಕಿ ಬಾಳೆಗೆ ಚಿನ್ನದ ಬೆಲೆ ಬಂದಿದ್ದು, ಬಾಳೆಹಣ್ಣು ಬೆಳೆದವನೇ ಶ್ರೀಮಂತ ಎನ್ನುವಂತಾಗಿದೆ. ಆದ್ರೆ ಗ್ರಾಹಕರ ಜೇಬಿಗೆ ಕತ್ತರಿಯಂತೂ ಬೀಳುತ್ತಿದೆ.

ಇದನ್ನೂ ಓದಿ