January16, 2026
Friday, January 16, 2026
spot_img

Travel Tips | ಫ್ಲೈಟ್ ನಲ್ಲಿ ಟ್ರಾವೆಲ್ ಮಾಡೋವಾಗ ತಪ್ಪಿಯೂ ಈ ಫುಡ್ ತೆಗೆದುಕೊಂಡು ಹೋಗ್ಬೇಡಿ!

ವಿಮಾನ ಪ್ರಯಾಣ ಅಂದರೆ ಹಲವರಿಗೆ ರೋಮಾಂಚನದ ಅನುಭವ. ಹೊಸ ಸ್ಥಳಕ್ಕೆ ಹಾರುವ ಉತ್ಸಾಹ, ಸುಂದರ ದೃಶ್ಯಗಳ ಜೊತೆ ಪ್ರಯಾಣದ ಸೌಂದರ್ಯ ಎಲ್ಲವೂ ಅದ್ಭುತ. ಆದರೆ, ಫ್ಲೈಟ್‌ನಲ್ಲಿ ಸುರಕ್ಷತೆ ಮತ್ತು ಶಿಷ್ಟಾಚಾರಕ್ಕೂ ಮಹತ್ವವಿದೆ. ಅದರಲ್ಲೂ ಆಹಾರದ ವಿಚಾರದಲ್ಲಿ ಕೆಲವು ನಿಯಮಗಳಿವೆ. ಕೆಲವೊಂದು ಆಹಾರಗಳನ್ನು ವಿಮಾನದಲ್ಲಿ ತೆಗೆದುಕೊಂಡು ಹೋಗುವುದು ತೊಂದರೆ ಉಂಟುಮಾಡಬಹುದು ಅಥವಾ ನಿಷೇಧಿವಾಗಿದೆ. ಹೀಗಾಗಿ ವಿಮಾನದಲ್ಲಿ ಪ್ರಯಾಣಿಸುವಾಗ ಯಾವ ರೀತಿಯ ಆಹಾರಗಳನ್ನು ತರುವುದನ್ನು ತಪ್ಪಿಸಬೇಕು ಎನ್ನುವುದನ್ನು ತಿಳಿದುಕೊಳ್ಳಿ.

ದ್ರವ ಅಥವಾ ಅರೆದ್ರವ ಆಹಾರಗಳು

ಸೂಪ್‌, ಗ್ರೇವಿ, ರಸ ಅಥವಾ ಹಾಲು ಇಂತಹ ದ್ರವ ಪದಾರ್ಥಗಳನ್ನು ವಿಮಾನದಲ್ಲಿ ಕೊಂಡೊಯ್ಯಲು ಅನುಮತಿ ಇಲ್ಲ. ಏಕೆಂದರೆ ಇವು ಸೋರಿಕೆಯಾಗುವ ಸಾಧ್ಯತೆ ಇರುತ್ತದೆ. ಸುರಕ್ಷತಾ ನಿಯಮದ ಪ್ರಕಾರ 100 ಮಿಲಿಲೀಟರ್‌ಗಿಂತ ಹೆಚ್ಚು ದ್ರವ ಪದಾರ್ಥಗಳನ್ನು ಕೈ ಬ್ಯಾಗ್‌ನಲ್ಲಿ ಕೊಂಡೊಯ್ಯಲು ಸಾಧ್ಯವಿಲ್ಲ.

ತೀವ್ರವಾದ ಘಾಟು ಹೊಂದಿರುವ ಆಹಾರ

ಮೀನು, ಉಪ್ಪಿನಕಾಯಿ, ಬೆಳ್ಳುಳ್ಳಿ ಅಥವಾ ಬೇರೆ ಬಗೆಯ ತೀವ್ರವಾದ ವಾಸನೆಯ ಆಹಾರಗಳು ಫ್ಲೈಟ್‌ನಲ್ಲಿ ಇತರ ಪ್ರಯಾಣಿಕರಿಗೆ ಅಸಹ್ಯ ಉಂಟುಮಾಡಬಹುದು. ವಿಮಾನದಲ್ಲಿ ಮುಚ್ಚಿದ ಜಾಗವಿರುವುದರಿಂದ ಇಂತಹ ವಾಸನೆಗಳು ಹೆಚ್ಚು ಕಾಲ ಉಳಿದುಕೊಳ್ಳುತ್ತವೆ. ಹೀಗಾಗಿ ಇಂತಹ ಆಹಾರಗಳನ್ನು ಕೊಂಡೊಯ್ಯುವುದನ್ನು ತಪ್ಪಿಸುವುದು ಉತ್ತಮ.

ಬೇಗ ಹಾಳಾಗುವ ಪದಾರ್ಥಗಳು

ಹಾಲು ಉತ್ಪನ್ನಗಳು, ಕ್ರೀಮ್‌ ಇರುವ ಕೇಕ್‌ಗಳು, ಮಾಂಸ ಅಥವಾ ಸೀ ಫುಡ್‌ ಇತ್ಯಾದಿ ಬೇಗ ಹಾಳಾಗುವ ಪದಾರ್ಥಗಳು ಉಷ್ಣಾಂಶ ಬದಲಾವಣೆಯಿಂದ ಹಾಳಾಗುವ ಸಾಧ್ಯತೆ ಇದೆ. ಇವುಗಳಿಂದ ದುರ್ವಾಸನೆ ಬಂದು ಅಸೌಕರ್ಯ ಉಂಟಾಗಬಹುದು.

ಕಾರ್ಬೊನೇಟ್ ಪಾನೀಯಗಳು ಅಥವಾ ಸೊಡಾ ಡ್ರಿಂಕ್ಸ್

ಸೊಡಾ, ಕೋಕ್ ಅಥವಾ ಕಾರ್ಬೊನೇಟ್ ಪಾನೀಯಗಳನ್ನು ವಿಮಾನದಲ್ಲಿ ತೆರೆಯುವುದು ಅಪಾಯಕಾರಿಯಾಗಿದೆ. ಏಕೆಂದರೆ ವಿಮಾನದಲ್ಲಿ ಒತ್ತಡ ಬದಲಾವಣೆಯಿಂದ ಪಾನೀಯ ಬಾಟಲ್ ಸ್ಫೋಟಿಸುವ ಸಾಧ್ಯತೆ ಇದೆ. ಆದ್ದರಿಂದ ಇವುಗಳನ್ನು ಕೊಂಡೊಯ್ಯುವುದನ್ನು ತಪ್ಪಿಸಿ.

ಫ್ಲೈಟ್ ಪ್ರಯಾಣದ ವೇಳೆ ಡ್ರೈ ಫ್ರೂಟ್ಸ್, ಬಿಸ್ಕೆಟ್‌ಗಳು, ಬ್ರೆಡ್‌ ಸ್ಯಾಂಡ್‌ವಿಚ್‌ಗಳು ಅಥವಾ ಹಣ್ಣುಗಳಂತ ಹಗುರವಾದ ಆಹಾರಗಳನ್ನು ಆಯ್ಕೆಮಾಡಿ. ಇವು ಸುಲಭವಾಗಿ ತಿನ್ನಬಹುದಾದಷ್ಟೇ ಅಲ್ಲ, ಆರೋಗ್ಯಕರವೂ ಆಗಿವೆ.

Must Read

error: Content is protected !!