ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದಲ್ಲಿ ಇನ್ಸ್ಟಾಗ್ರಾಮ್ ಫ್ರೆಂಡ್ ನಿಂದಲೇ 7ನೇ ತರಗತಿ ಮೇಲೆ ಸಾಮೂಹಿಕ ಅತ್ಯಾಚಾರವಾಗಿರುವ ಘಟನೆ ವರದಿಯಾಗಿದೆ.
ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿ ಈ ಧಾರುಣ ಘಟನೆ ನಡೆದಿದ್ದು, 7ನೇ ತರಗತಿ ವಿದ್ಯಾರ್ಥಿನಿಯನ್ನು ಆಕೆಯ ಇನ್ಸ್ಟಾಗ್ರಾಮ್ ಸ್ನೇಹಿತನೇ ಆತನ ಸ್ನೇಹಿತರ ಜೊತೆ ಸೇರಿ ಹೊಟೆಲ್ ರೂಮಿನಲ್ಲಿ ಕೂಡಿಹಾಕಿ ನಿರಂತರ 2 ದಿನ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ಈ ಸಂಬಂಧ ಸಂತ್ರಸ್ಥೆ ತಾಯಿ ದೂರು ನೀಡಿದ್ದು, ದೂರಿನಲ್ಲಿ ಅಪ್ರಾಪ್ತ ಬಾಲಕಿಯ ಇನ್ಸ್ಟಾಗ್ರಾಮ್ ಸ್ನೇಹಿತನೇ ಆಕೆಯ ಮೇಲೆ ತನ್ನ ಸ್ನೇಹಿತರೊಂದಿಗೆ ಸೇರಿ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಿದ್ದಾರೆ.
ದೂರಿನಲ್ಲಿರುವಂತೆ ಸಂತ್ರಸ್ಥೆಗೆ ಇನ್ಸ್ಟಾಗ್ರಾಮ್‌ನಲ್ಲಿ ವಿಮಲ್ ಯಾದವ್ ಎಂಬಾತನ ಪರಿಚಯವಾಗಿತ್ತು. ಬಳಿಕ ಇಬ್ಬರೂ ಚಾಟ್ ಮಾಡುತ್ತಿದ್ದರು. ಬಳಿಕ ಕರೆ ಮೂಲಕ ಮಾತನಾಡುತ್ತಿದ್ದರು. ತನ್ನ ಬಣ್ಣದ ಮಾತುಗಳಿಂದ ಆಕೆಯನ್ನು ಪುಸಲಾಯಿಸಿದ್ದ ಎಂದು ಆರೋಪಿಸಿದ್ದಾರೆ.
ಅಲ್ಲದೆ ಇದೇ ನವೆಂಬರ್ 2 ರಂದು, ವಿಮಲ್ ಅಪ್ರಾಪ್ತ ವಯಸ್ಕ ಸಂತ್ರಸ್ಥೆಯನ್ನು ಭೇಟಿಯಾಗಲು ಕೇಳಿಕೊಂಡ. ಅದರಂತೆ ಸಂತ್ರಸ್ಥೆ ಕೂಡ ಭೇಟಿಯಾಗಲು ಒಪ್ಪಿಗೆ ಸೂಚಿಸಿದ್ದಳು. ಅದರಂತೆ ನಿಗಧಿತ ಸ್ಥಳಕ್ಕೆ ಹೋದಾಗ ಆರೋಪಿ ವಿಮಲ್ ತನ್ನ ಸ್ಕಾರ್ಪಿಯೋ ಕಾರಿನೊಳಗೆ ಕೂರಿಸಿಕೊಂಡು ಹೊಟೆಲ್ ಗೆ ಕರೆತಂದಿದ್ದಾನೆ. ಆದರೆ ಅಷ್ಟು ಹೊತ್ತಿಗಾಗಲೇ ಹೊಟೆಲ್ ನಲ್ಲಿ ಆರೋಪಿಯ ಇತರೆ ಸ್ನೇಹಿತರಾದ ಪಿಯೂಷ್ ಮಿಶ್ರಾ ಮತ್ತು ಶುಭಮ್ ಶುಕ್ಲಾ ಎಂಬುವವರು ಇದ್ದರು.
ಭಾರತೀಯ ನ್ಯಾಯ ಸಂಹಿತಾ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪಿಯೂಷ್ ಮತ್ತು ಶುಭಂ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ಪ್ರಮುಖ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

