Saturday, November 8, 2025

FOOD | ಟೇಸ್ಟಿ ಚಿಕನ್‌ ಕೀಮಾ ಪರೋಟ ತಿಂತೀರಾ? ಸಿಂಪಲ್‌ ರೆಸಿಪಿ ಇಲ್ಲಿದೆ..

  • ಕತ್ತರಿಸಿದ ಚಿಕನ್ – 500 ಗ್ರಾಂ
  • ದೊಡ್ಡ ಈರುಳ್ಳಿ – 1
  • ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಚಮಚ
  • ಹಸಿ ಮೆಣಸು – 2-3
  • ಟೊಮೇಟೊ ಕತ್ತರಿಸಿದ್ದು – 1
  • ಅರಿಶಿನ ಪುಡಿ – ¼ ಚಮಚ
  • ಅಚ್ಚ ಖಾರದ ಪುಡಿ – 1 ಚಮಚ
  • ಗರಂ ಮಸಾಲೆ – 1 ಚಮಚ
  • ಧನ್ಯ ಪುಡಿ – 1 ಚಮಚ
  • ಜೀರಿಗೆ ಪುಡಿ – 1 ಚಮಚ
  • ಉಪ್ಪು – ರುಚಿಗೆ ತಕ್ಕಷ್ಟು
  • ತಾಜಾ ಕೊತ್ತಂಬರಿ ಸೊಪ್ಪು – ¼ ಕಪ್
  • ಲಿಂಬೆ ರಸ – ½ ಚಮಚ
  • ಹಿಟ್ಟು – 1 ಕಪ್
  • ತುಪ್ಪ – ಬೇಕಾದಷ್ಟು
  • ಮಾಡುವ ವಿಧಾನ
  • ಮೊದಲಿಗೆ ತರಕಾರಿಗಳನ್ನು ಚೆನ್ನಾಗಿ ತೊಳೆದು ಹೆಚ್ಚಿಕೊಳ್ಳಿ. ಬಗೆ ಬಗೆಯ ತರಕಾರಿಗಳನ್ನು ಈ ಪರಾಠೆಗೆ ಬಳಸಿಕೊಳ್ಳಬಹುದು.
  • ಈಗ ಹಸಿ ಚಿಕನ್ ಕೀಮಾ ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದುಕೊಳ್ಳಿ. ಈಗ ಗ್ರೈಂಡರ್‌ನಲ್ಲಿ ಕೀಮಾ ತೆಗೆದುಕೊಂಡು ಅದನ್ನು ಟೊಮೇಟೊ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಈರುಳ್ಳಿ, ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್‌ನೊಂದಿಗೆ ಗ್ರೈಂಡ್ ಮಾಡಿಕೊಳ್ಳಿ. ಚೆನ್ನಾಗಿ ಕೀಮಾ ಗ್ರೈಂಡ್ ಅಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
  • ಈಗ ನುಣ್ಣನೆ ಮಿಶ್ರಣ ಸಿದ್ಧಪಡಿಸಿಕೊಳ್ಳಿ, ಮಸಾಲೆಗಳೊಂದಿಗೆ ಕೀಮಾವನ್ನು ನಾದಿಕೊಂಡು ಪಕ್ಕಕ್ಕಿಡಿ. ಈಗ ಗೋಧಿ ಇಲ್ಲವೇ ಮೈದಾ ಹುಡಿ ತೆಗೆದುಕೊಂಡು ಹಿಟ್ಟು ನಾದಿಕೊಳ್ಳಿ ಹಾಗೂ ಸ್ವಲ್ಪ ಸಮಯ ನಾದಿದ ಹಿಟ್ಟನ್ನು ಹಾಗೆಯೇ ಬಿಡಿ.
  • ಹಿಟ್ಟಿನ ಸಣ್ಣ ಉಂಡೆಗಳನ್ನು ಮಾಡಿ, ಹಿಟ್ಟಿನೊಳಗೆ ಕೀಮಾ ಉಂಡೆ ಹಾಕಿಕೊಂಡು ಭರ್ತಿ ಮಾಡಿ, ಉಂಡೆಗಳನ್ನು ಹಿಟ್ಟಿಗೆ ಮುಳುಗಿಸಿಕೊಂಡು ಮೃದುವಾಗಿ ಪರಾಠ ಆಕಾರದಲ್ಲಿ ಲಟ್ಟಿಸಿ. ಹೆಚ್ಚು ಒತ್ತಡ ಹಾಕಿ ಪರಾಠವನ್ನು ಲಟ್ಟಿಸದಿರಿ.
  • ಈಗ ತವಾ ಬಿಸಿ ಮಾಡಿಕೊಳ್ಳಿ ನಂತರ ಲಟ್ಟಿಸಿದ ತವಾವನ್ನು ತುಪ್ಪ ಅಥವಾ ಎಣ್ಣೆ ಹಾಕಿ ಬಿಸಿ ಬೇಯಿಸಿಕೊಳ್ಳಿ. ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿದ್ರೆ ಪರೋಟ ರೆಡಿ
error: Content is protected !!