Sunday, November 9, 2025

14 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಮಹಿಳೆಗೆ 54 ವರ್ಷ ಜೈಲು ಶಿಕ್ಷೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

14 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ತಿರುವರೂರು ಫಾಸ್ಟ್ ಟ್ರ್ಯಾಕ್ ಮಹಿಳಾ ನ್ಯಾಯಾಲಯವು ಶುಕ್ರವಾರ 39 ವರ್ಷದ ಮಹಿಳೆಗೆ 54 ವರ್ಷಗಳ ಜೈಲು ಶಿಕ್ಷೆ ಮತ್ತು 18,000 ರೂ. ದಂಡ ವಿಧಿಸಿದೆ.

ದೇಡಿಯೂರಿನ ಲಲಿತಾ ತಿರುವರೂರು ಜಿಲ್ಲೆಯ ಎರವಾಂಚೇರಿ ಪ್ರದೇಶದ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. 2021 ರಲ್ಲಿ ಈ ಮಹಿಳೆಗೆ ಆಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಹುಡುಗನೊಂದಿಗೆ ಸಂಬಂಧವಿತ್ತು. ಲಲಿತಾ ಅಕ್ಟೋಬರ್ 26, 2021 ರಂದು ವಿದ್ಯಾರ್ಥಿಯನ್ನು ಊಟಿಗೆ ಕರೆದೊಯ್ದು ತನ್ನೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ಸಂಬಂಧ ಬಾಲಕನ ಪೋಷಕರು ಎರವಾಂಚೇರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಬಾಲಕನ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತೀವ್ರ ತನಿಖೆ ನಡೆಸಿದ್ದರು. ಈ ವೇಳೆ, ಆರೋಪಿತೆ ಲಲಿತಾ ಬಾಲಕನನ್ನು ಊಟಿಯಿಂದ ಮತ್ತು ನಂತರ ವೇಲಾಂಕಣ್ಣಿಗೆ ಕರೆದೊಯ್ದಿದ್ದಾಳೆ ಎಂದು ತಿಳಿದುಬಂದಿತ್ತು . ಇಬ್ಬರೂ ಲಾಡ್ಜ್‌ನಲ್ಲಿ ತಂಗಿದ್ದರು ಎಂದು ಪೊಲೀಸರು ತಿಳಿಸಿದ್ದರು.

ತೀವ್ರ ಹುಡುಕಾಟದ ಬಳಿಕ 2021ರ ನವೆಂಬರ್ 4 ರಂದು ಲಲಿತಾಳನ್ನು ಪತ್ತೆ ಮಾಡಿದ ಪೊಲೀಸರು ಬಾಲಕನನ್ನು ರಕ್ಷಿಸಿದ್ದರು. ನಂತರ ಎರವಂಚೇರಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಲಲಿತಾಳನ್ನು ಬಂಧಿಸಿದ್ದರು. ಪ್ರಕರಣದ ವಿಚಾರಣೆಯನ್ನು ತಿರುವರೂರು ಫಾಸ್ಟ್ ಟ್ರ್ಯಾಕ್ ಮಹಿಳಾ ನ್ಯಾಯಾಲಯದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಲಲಿತಾ ಆ ಹುಡುಗನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಳು ಎಂದು ಬೆಳಕಿಗೆ ಬಂದಿತ್ತು.

error: Content is protected !!