Sunday, January 11, 2026

SHOCKING | ಮಾಲಿಯಲ್ಲಿ ಬಂದೂಕುಧಾರಿಗಳಿಂದ ಐವರು ಭಾರತೀಯರ ಕಿಡ್ನ್ಯಾಪ್‌

ಪಶ್ಚಿಮ ಮಾಲಿಯ (Mali) ಕೋಬ್ರಿಯಲ್ಲಿ ಭಾರತೀಯ (India) ಮೂಲದ ಐವರು ಕಾರ್ಮಿಕರನ್ನು ಬಂದೂಕುಧಾರಿಗಳು ಅಪಹರಿಸಿದ್ದಾರೆ. ಹೆಚ್ಚುತ್ತಿರುವ ಅಶಾಂತಿ ಮತ್ತು ಜಿಹಾದಿ ಹಿಂಸಾಚಾರದ ನಡುವೆ ಈ ಅಪಹರಣ ನಡೆದಿದೆ.

ಗುರುವಾರ ಕಾರ್ಮಿಕರನ್ನು ಬಂದೂಕುಧಾರಿಗಳು ಅಪಹರಿಸಿದ್ದಾರೆ. ಅವರೆಲ್ಲ ವಿದ್ಯುತ್ ಯೋಜನೆಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಐವರು ಕಿಡ್ನ್ಯಾಪ್‌ ಆಗಿರುವ ಬಗ್ಗೆ ಕಂಪನಿ ಮತ್ತು ಭದ್ರತಾ ಮೂಲಗಳು ದೃಢಪಡಿಸಿವೆ. ಇಲ್ಲಿಯವರೆಗೆ ಯಾವುದೇ ಗುಂಪು ಅಪಹರಣದ ಹೊಣೆ ಹೊತ್ತುಕೊಂಡಿಲ್ಲ ಎಂದು ವರದಿಯಾಗಿದೆ. 

ಮುನ್ನೆಚ್ಚರಿಕಾ ಕ್ರಮವಾಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಇತರ ಭಾರತೀಯರನ್ನು ರಾಜಧಾನಿಯಾದ ಬಮಾಕೊಗೆ ಸ್ಥಳಾಂತರಿಸಲಾಗಿದೆ.

ಪ್ರಸ್ತುತ ಮಿಲಿಟರಿ ಆಡಳಿತವಿರುವ ಮಾಲಿ ಭುಗಿಲೆದ್ದಿರುವ ಹಿಂಸಾಚಾರ ನಿಯಂತ್ರಿಸಲು ಹೆಣಗಾಡುತ್ತಿದೆ. 2012 ರಿಂದ ದಂಗೆಗಳು ಮತ್ತು ಸಂಘರ್ಷಗಳಿಂದ ಬಳಲುತ್ತಿರುವ ಇಲ್ಲಿ ವಿದೇಶಿಯರನ್ನು ಗುರಿಯಾಗಿಸಿ ನಡೆಯುವ ಅಪಹರಣಗಳು ಸಾಮಾನ್ಯವಾಗಿದೆ. ಜೆಎನ್‌ಐಎಂ ಜಿಹಾದಿಗಳು ಸೆಪ್ಟೆಂಬರ್‌ನಲ್ಲಿ ಬಮಾಕೊ ಬಳಿ ಇಬ್ಬರು ಎಮಿರಾಟಿ ಪ್ರಜೆಗಳು ಮತ್ತು ಒಬ್ಬ ಇರಾನಿಯನ್ನರನ್ನು ಅಪಹರಿಸಿದ್ದರು.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!