Saturday, November 8, 2025

Kitchen tips | ಈ ರೀತಿ ಸ್ಟೋರ್ ಮಾಡಿದ್ರೆ ಹಸಿಮೆಣಸಿನಕಾಯಿ ತಿಂಗಳು ಗಟ್ಟಲೆ ಫ್ರೆಶ್ ಆಗಿರುತ್ತೆ

ಹಸಿಮೆಣಸಿನಕಾಯಿ ಇಲ್ಲದೆ ದಕ್ಷಿಣ ಭಾರತದ ಅನೇಕ ಭಕ್ಷ್ಯಗಳು ಅಪೂರ್ಣವೇ ಸರಿ! ಆದರೆ ನಾವು ಖರೀದಿಸಿದ ಮೆಣಸಿನಕಾಯಿಗಳು ಕೆಲವೇ ದಿನಗಳಲ್ಲಿ ಹಾಳಾಗುತ್ತವೆ, ಕೆಲವೊಮ್ಮೆ ಒಣಗುತ್ತವೆ. ಇಂತಹ ಸಮಸ್ಯೆ ಎದುರಾಗದಂತೆ ಒಂದು ತಿಂಗಳವರೆಗೆ ಹಸಿರು ಮೆಣಸಿನಕಾಯಿಗಳನ್ನು ತಾಜಾವಾಗಿಡಲು ಕೆಲವು ಸರಳ ಉಪಾಯಗಳನ್ನು ಅನುಸರಿಸಬಹುದು.

  • ತೊಟ್ಟು ಅಥವಾ ಕಾಂಡ ತೆಗೆದುಹಾಕಿ: ಹಸಿರು ಮೆಣಸಿನಕಾಯಿಯ ತೊಟ್ಟು ಅಥವಾ ಕಾಂಡವನ್ನು ತೆಗೆದಿಲ್ಲದಿದ್ದರೆ ಅದು ಬೇಗನೆ ಹಾಳಾಗುತ್ತದೆ. ಕಾಂಡದಲ್ಲೇ ತೇವಾಂಶ ಹೆಚ್ಚಾಗಿ ಕಾಯಿ ಕೊಳೆಯಲು ಕಾರಣವಾಗುತ್ತದೆ. ಆದ್ದರಿಂದ ಮೊದಲು ಕಾಂಡವನ್ನು ತೆಗೆದು, ತೊಳೆದು, ಒಣಗಿಸಿ ನಂತರ ಫ್ರಿಜ್‌ನಲ್ಲಿ ಇಡಬೇಕು.
  • ಜಿಪ್‌ಲಾಕ್ ಬ್ಯಾಗ್ ಬಳಸಿ: ಒಂದು ತಿಂಗಳವರೆಗೆ ಮೆಣಸಿನಕಾಯಿಗಳನ್ನು ತಾಜಾವಾಗಿಡಬೇಕೆಂದರೆ ಜಿಪ್‌ಲಾಕ್ ಬ್ಯಾಗ್ ಅತ್ಯುತ್ತಮ ಆಯ್ಕೆ. ಮೊದಲು ಮೆಣಸಿನಕಾಯಿಗಳನ್ನು ಚೆನ್ನಾಗಿ ತೊಳೆದು ಒಣಗಿಸಿ. ನಂತರ ಜಿಪ್‌ಲಾಕ್ ಬ್ಯಾಗ್‌ನಲ್ಲಿ ಇಟ್ಟು ಫ್ರಿಜ್‌ನ ತರಕಾರಿ ಟ್ರೇಯಲ್ಲಿ ಸಂಗ್ರಹಿಸಿ.
  • ಪೇಪರ್ ಅಥವಾ ಬಟ್ಟೆ ಬಳಸಿ: ನಿಮ್ಮ ಬಳಿ ಜಿಪ್‌ಲಾಕ್ ಬ್ಯಾಗ್ ಇಲ್ಲದಿದ್ದರೂ ಚಿಂತಿಸಬೇಕಿಲ್ಲ. ಬದಲಿಗೆ ಹಳೆಯ ವೃತ್ತಪತ್ರಿಕೆ ಅಥವಾ ಸ್ವಚ್ಛವಾದ ಬಟ್ಟೆಯಲ್ಲಿ ಮೆಣಸಿನಕಾಯಿಗಳನ್ನು ಸುತ್ತಿ ಫ್ರಿಜ್‌ನ ಬಾಗಿಲಲ್ಲಿ ಇಡಿ. ಬಟ್ಟೆಯಲ್ಲಿ ಸುತ್ತಿದರೆ ತೇವಾಂಶ ಶೋಷಿಸಿಕೊಂಡು ಹಸಿಮೆಣಸಿನಕಾಯಿಗಳು ತಾಜಾ ಉಳಿಯುತ್ತವೆ.
  • ತೇವಾಂಶ ರಹಿತ ಡಬ್ಬಿ ಬಳಸಿ: ಮೆಣಸಿನಕಾಯಿಗಳನ್ನು ಡಬ್ಬಿಯಲ್ಲಿ ಇಡುತ್ತಿದ್ದರೆ ಅದು ಸಂಪೂರ್ಣ ಒಣಗಿರಬೇಕು. ಪ್ಲಾಸ್ಟಿಕ್ ಅಥವಾ ಸ್ಟೀಲ್ ಡಬ್ಬಿಯಾದರೂ ಪರವಾಗಿಲ್ಲ, ಆದರೆ ತೇವಾಂಶ ಇದ್ದರೆ ಕಾಯಿಗಳು ಬೇಗನೆ ಕೊಳೆಯುತ್ತವೆ. ಆದ್ದರಿಂದ ಸಂಗ್ರಹಿಸುವ ಮೊದಲು ಪಾತ್ರೆ ಸಂಪೂರ್ಣ ಒಣಗಿದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ಮಾಗಿದ ಮೆಣಸಿನಕಾಯಿ ತರಬೇಡಿ: ಮಾರುಕಟ್ಟೆಯಲ್ಲಿ ಮಾಗಿದ ಅಥವಾ ಹಳದಿ ಬಣ್ಣ ತಾಳಿರುವ ಮೆಣಸಿನಕಾಯಿಗಳನ್ನು ಖರೀದಿಸಬೇಡಿ. ಇವು ಬೇಗನೆ ಹಾಳಾಗುತ್ತವೆ. ತಾಜಾ, ಹಸಿರಾದ ಮೆಣಸಿನಕಾಯಿಗಳನ್ನು ಆರಿಸಿ.
error: Content is protected !!