Saturday, November 8, 2025

ಮಣಿಪುರದಲ್ಲಿ ನಿಷೇಧಿತ ಸಂಘಟನೆಗಳ ಮೂವರು ಉಗ್ರರು ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಿಷೇಧಿತ ಸಂಘಟನೆಗಳಿಗೆ ಸೇರಿದ ಮೂವರು ಉಗ್ರರನ್ನು ಬಂಧಿಸಿದ್ದಾರೆ.

ಬಂಧಿತರಲ್ಲಿ ಓರ್ವ 22 ವರ್ಷದ ಮಹಿಳೆ ಸೇರಿದ್ದು, ಆಕೆ ನಿಷೇಧಿತ ಪ್ರೀಪಾಕ್‌ (Prepak) ಸಂಘಟನೆಯ ಕಾರ್ಯಕರ್ತೆಯಾಗಿದ್ದಾಳೆ. ಆಕೆಯನ್ನು ಶುಕ್ರವಾರ ಆಂಡ್ರೋ ಪ್ರದೇಶದಲ್ಲಿರುವ ಮನೆಯಿಂದ ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಇನ್ನೂ ಇಬ್ಬರು ಉಗ್ರರು ಪೀಪಲ್ಸ್ ಲಿಬರೇಶನ್ ಆರ್ಮಿ (PLA) ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದು, ಅವರನ್ನು ಖುರೈ ಲಾಂಮ್ಲಾಂಗ್ ಮತ್ತು ಪೋರೊಂಪಾಟ್ ಪ್ರದೇಶಗಳಿಂದ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!