January16, 2026
Friday, January 16, 2026
spot_img

Toothbrush | ಯಾವಾಗ್ಲೂ ಹಲ್ಲು ಉಜ್ಜುತ್ತಿರಾ ಅಲ್ವಾ? ಹಾಗಿದ್ರೆ ಟೂತ್‌ಬ್ರಷ್ ಬಗ್ಗೆನೂ ಗೊತ್ತಿರ್ಬೇಕಲ್ವಾ?

ನಾವು ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಕೈಗೆ ಬರುವ ಮೊದಲ ವಸ್ತು “ಟೂತ್‌ಬ್ರಷ್” ಆದರೆ ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಅನ್ನೋದನ್ನು ಬಹಳ ಮಂದಿ ತಿಳಿದಿರೋದಿಲ್ಲ. ಹಲ್ಲುಗಳನ್ನು ಶುದ್ಧವಾಗಿಡೋ ಅಭ್ಯಾಸವು ಅತಿ ಪುರಾತನ ನಾಗರಿಕತೆಗಳಿಂದಲೇ ಆರಂಭವಾಗಿತ್ತು. ಟೂತ್‌ಬ್ರಷ್ ಇಂದು ನಾವು ನೋಡುತ್ತಿರುವ ಆಧುನಿಕ ರೂಪ ಪಡೆಯಲು ಶತಮಾನಗಳ ಪ್ರಯಾಣ ನಡೆಸಿದೆ.

ಹಲ್ಲುಜ್ಜುವ ಟೂತ್‌ಬ್ರಷ್ ಆರಂಭಿಕ ರೂಪಗಳು ಕ್ರಿ.ಪೂ 3000 ರಷ್ಟು ಹಿಂದೆಯೇ ಇದ್ದವು. ಪ್ರಾಚೀನ ನಾಗರಿಕತೆಗಳು ಹಲ್ಲುಗಳನ್ನು ಸ್ವಚ್ಛಗೊಳಿಸಲು “ಚೂ ಸ್ಟಿಕ್” (chew sticks) ಎಂದು ಕರೆಯುವ, ಸಣ್ಣ ಕಡ್ಡಿಗಳ ತುದಿಗಳನ್ನು ಸೀಳಿ ನಾರುಗಳನ್ನಾಗಿ ಮಾಡಿದ ಬಳಸುತ್ತಿದ್ದವು. ಭಾರತದಲ್ಲಿ, ಬೇವಿನ ಮರಗಳ ರೆಂಬೆಗಳನ್ನು (ದಂತದ ಕಡ್ಡಿ) ಹಲ್ಲುಜ್ಜಲು ಬಳಸುವ ಅಭ್ಯಾಸ ಇಂದಿಗೂ ರೂಢಿಯಲ್ಲಿದೆ.

ಆಧಿನಿಕ ಟೂತ್ ಬ್ರಷ್‌ ಜನನ:

ಆಧುನಿಕ ಟೂತ್ ಬ್ರಷ್‌ಗೆ ಹೋಲುವ ಮೊದಲ ಬ್ರಿಸ್ಟಲ್ ಟೂತ್‌ಬ್ರಷ್ ಅನ್ನು 1498 ರಲ್ಲಿ ಚೀನಾದಲ್ಲಿ ಕಂಡುಹಿಡಿಯಲಾಯಿತು. ಈ ಬ್ರಷ್‌ಗಳ ಹಿಡಿಕೆಗಳನ್ನು ಬಿದಿರು ಅಥವಾ ಮೂಳೆಯಂತಹ ವಸ್ತುಗಳಿಂದ ಮಾಡಲಾಗುತ್ತಿತ್ತು. ಹಂದಿಯ ಕುತ್ತಿಗೆಯ ಹಿಂಭಾಗದ ಗಟ್ಟಿಯಾದ, ಒರಟಾದ ಕೂದಲನ್ನು ಬ್ರಿಸ್ಟಲ್ (ನಾರು) ಗಳಾಗಿ ಬಳಸಲಾಗುತ್ತಿತ್ತು.

ಯುರೋಪಿಯನ್ ಪ್ರಯಾಣಿಕರು ಈ ಕಲ್ಪನೆಯನ್ನು ಚೀನಾದಿಂದ ಯುರೋಪಿಗೆ ತಂದರು, ಆದರೆ ಹಂದಿ ಕೂದಲಿನ ಬ್ರಿಸ್ಟಲ್‌ಗಳು ತುಂಬಾ ಒರಟಾಗಿರುತ್ತಿದ್ದರಿಂದ ಇದು ಅಲ್ಲಿ ಹೆಚ್ಚು ಜನಪ್ರಿಯವಾಗಲಿಲ್ಲ.

ನೈಲಾನ್ ಬ್ರಿಸ್ಟಲ್ ಪರಿಚಯ (1938):

1938 ರವರೆಗೂ ಬ್ರಿಸ್ಟಲ್‌ಗಳಿಗೆ ಪ್ರಾಣಿಗಳ ಕೂದಲನ್ನೇ ಬಳಸಲಾಗುತ್ತಿತ್ತು. ಡ್ಯುಪಾಂಟ್ (DuPont) ಕಂಪನಿಯು ನೈಲಾನ್ ಫೈಬರ್‌ಗಳನ್ನು ಅಭಿವೃದ್ಧಿಪಡಿಸಿತು, ಇದು ಪ್ರಾಣಿಗಳ ಕೂದಲಿಗೆ ಹೋಲಿಸಿದರೆ ಹೆಚ್ಚು ನೈರ್ಮಲ್ಯಕರ ಮತ್ತು ಗಟ್ಟಿಯಾದ ವಸ್ತುವಾಗಿತ್ತು. ಮೊದಲ ನೈಲಾನ್ ಟೂತ್ ಬ್ರಷ್‌ಗೆ “ಡಾಕ್ಟರ್ ವೆಸ್ಟ್ಸ್ ಮಿರಕಲ್ ಟೂತ್ ಬ್ರಷ್” (Doctor West’s Miracle Toothbrush) ಎಂದು ಹೆಸರಿಸಲಾಯಿತು. ಅಲ್ಲಿಂದ ಮುಂದೆ ನೈಲಾನ್ ಟೂತ್ ಬ್ರಷ್‌ ಗಳು ಮನೆಮಾತಾದವು.

ವ್ಯಾಪಕ ಬಳಕೆ:

ಎರಡನೇ ಮಹಾಯುದ್ಧದ ಸಮಯದಲ್ಲಿ ಅಮೇರಿಕನ್ ಸೈನಿಕರಲ್ಲಿ ಹಲ್ಲುಜ್ಜುವ ಅಭ್ಯಾಸವನ್ನು ಕಡ್ಡಾಯಗೊಳಿಸಲಾಯಿತು, ಇದು ಯುದ್ಧದ ನಂತರ ಅಮೇರಿಕಾದಲ್ಲಿ ಮತ್ತು ಜಾಗತಿಕವಾಗಿ ಟೂತ್ ಬ್ರಷ್ ಬಳಕೆಯನ್ನು ಜನಪ್ರಿಯಗೊಳಿಸಲು ಸಹಾಯ ಮಾಡಿತು.

Must Read

error: Content is protected !!