January16, 2026
Friday, January 16, 2026
spot_img

Travel Insurance | ನೀವು ಟ್ರಾವೆಲ್ ಪ್ರಿಯರಾ? ಹಾಗಿದ್ರೆ ಈ Insurance ಬಗ್ಗೆ ನಿಮಗೆ ಗೊತ್ತಿರಲೇ ಬೇಕು ಅಲ್ವಾ!

ಇಂದಿನ ಯುಗದಲ್ಲಿ ಇನ್ಷೂರೆನ್ಸ್ (Insurance) ಎನ್ನುವುದು ಕೇವಲ ಒಂದು ಆರ್ಥಿಕ ಉತ್ಪನ್ನವಲ್ಲ, ಅದು ಸುರಕ್ಷತೆ ಮತ್ತು ಭರವಸೆಯ ಸಂಕೇತವಾಗಿದೆ. ಅಪಘಾತ ವಿಮೆ, ಜೀವ ವಿಮೆ, ವಾಹನ ವಿಮೆ ಮುಂತಾದ ಹಲವಾರು ರೀತಿಯ ಇನ್ಷೂರೆನ್ಸ್ ಯೋಜನೆಗಳ ನಡುವೆ, ಪ್ರಯಾಣ ವಿಮೆ (Travel Insurance) ಕೂಡ ಒಂದು ಪ್ರಮುಖ ಹೂಡಿಕೆಯ ಯೋಜನೆಯಾಗಿದೆ. ದೂರದೂರಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚುತ್ತಿರುವ ಈ ದಿನಗಳಲ್ಲಿ, ಪ್ರಯಾಣದ ಸಮಯದಲ್ಲಿ ಸಂಭವಿಸಬಹುದಾದ ಅನಾಹುತಗಳು ಅಥವಾ ಆರ್ಥಿಕ ನಷ್ಟದಿಂದ ರಕ್ಷಣೆ ನೀಡುವ ಅತ್ಯುತ್ತಮ ಸಾಧನವಾಗಿಯೂ ಇದು ಪರಿಣಮಿಸಿದೆ.

ಪ್ರಯಾಣ ವಿಮೆಯು ದುರಂತ, ವೈದ್ಯಕೀಯ ತುರ್ತು ಪರಿಸ್ಥಿತಿ ಅಥವಾ ಲಗೇಜು ಕಳೆದುಹೋಗುವಂತಹ ಅನಿರೀಕ್ಷಿತ ಘಟನೆಗಳಿಂದ ಉಂಟಾಗುವ ನಷ್ಟವನ್ನು ಕವರ್ ಮಾಡುತ್ತದೆ. ಟ್ರಾವೆಲ್ ಇನ್ಷೂರೆನ್ಸ್ ಮುಖ್ಯವಾಗಿ ಎರಡು ರೀತಿಯದು.

ಮೊದಲನೆಯದು ಪ್ರಯಾಣದ ವೇಳೆ ಎದುರಾಗುವ ಆರೋಗ್ಯ ಸಮಸ್ಯೆಗಳಿಗೆ ರಕ್ಷಣೆ ನೀಡುತ್ತದೆ. ಉದಾಹರಣೆಗೆ, ವಿದೇಶ ಪ್ರವಾಸದ ವೇಳೆ ಅಸೌಖ್ಯ ಉಂಟಾದರೆ, ಆಸ್ಪತ್ರೆ ವೆಚ್ಚಗಳನ್ನು ಈ ವಿಮೆ ಹೊರುತ್ತದೆ. ನೈಸರ್ಗಿಕ ಅವಘಡಗಳಿಂದ ಉಂಟಾಗುವ ನಷ್ಟವನ್ನೂ ಇದು ಒಳಗೊಂಡಿರುತ್ತದೆ.

ಎರಡನೇ ರೀತಿಯ ಟ್ರಾವೆಲ್ ಇನ್ಷೂರೆನ್ಸ್‌ ಲಗೇಜು ಅಥವಾ ಡಾಕ್ಯುಮೆಂಟ್ ಕಳೆದುಹೋಗುವ, ಟಿಕೆಟ್ ರದ್ದಾಗುವ, ಅಥವಾ ಪ್ರಯಾಣ ವಿಳಂಬದಿಂದ ಉಂಟಾಗುವ ವೆಚ್ಚಗಳನ್ನು ಕವರ್ ಮಾಡುತ್ತದೆ.

ಈ ರೀತಿಯ ಸ್ಕೀಮ್‌ಗಳು ಪ್ರವಾಸಿಗರಿಗೆ ಮಾತ್ರವಲ್ಲ, ವಿದ್ಯಾರ್ಥಿಗಳಿಗೆ ಮತ್ತು ವಿದೇಶದಲ್ಲಿ ತರಬೇತಿ ಪಡೆಯುವವರಿಗೆ ಸಹ ಬಹಳ ಉಪಯೋಗಕರವಾಗಿವೆ. ವಿದ್ಯಾರ್ಥಿಗಳು ಅಥವಾ ಕ್ರೀಡಾಪಟುಗಳು ವಿದೇಶಗಳಲ್ಲಿ ಓದು ಅಥವಾ ತರಬೇತಿ ಪಡೆಯುವಾಗ ಎದುರಿಸಬಹುದಾದ ಕಾನೂನು ಅಥವಾ ಆರ್ಥಿಕ ಸಮಸ್ಯೆಗಳಿಗೂ ಇವು ಪರಿಹಾರ ಒದಗಿಸುತ್ತವೆ.

ಪ್ರಯಾಣ ವಿಮೆ ಪಡೆದವರು ಅಗತ್ಯ ದಾಖಲೆಗಳನ್ನು ಸರಿಯಾಗಿ ಸಂಗ್ರಹಿಸುವುದು ಅತ್ಯಂತ ಮುಖ್ಯ. ವೈದ್ಯಕೀಯ ವೆಚ್ಚಗಳ ಬಿಲ್‌ಗಳು, ಟಿಕೆಟ್ ರದ್ದುಪಡುವ ದಾಖಲೆಗಳು, ಆಸ್ಪತ್ರೆ ರಸೀದಿ ಮುಂತಾದವುಗಳನ್ನು ಜೊತೆಯಲ್ಲೇ ಇರಬೇಕು. ಈ ದಾಖಲೆಗಳ ಆಧಾರದಲ್ಲಿ ವಿಮಾ ಮೊತ್ತವನ್ನು ಕ್ಲೈಮ್ ಮಾಡಬಹುದು.

Must Read

error: Content is protected !!