Tuesday, November 11, 2025

ಸಿಎಂ ಮಾತಿಗೆ ಮಾನ್ಯತೆ: 3,300 ಅಲ್ಲ, ಈಗ 3,350, ಬೆಳಗಾವಿ ರೈತರಿಗೆ ಬಂಪರ್ ಬೆಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೆಡಕಿಹಾಳ ಗ್ರಾಮದಲ್ಲಿರುವ ವೆಂಕಟೇಶ್ವರ ಸಕ್ಕರೆ ಕಾರ್ಖಾನೆಯು ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದೆ. ಕಾರ್ಖಾನೆಯು ಒಂದು ಟನ್ ಕಬ್ಬಿಗೆ 3,350 ನೀಡುವುದಾಗಿ ಘೋಷಿಸಿದ್ದು, ಇದು ರಾಜ್ಯ ಸರ್ಕಾರ ನಿಗದಿಪಡಿಸಿದ ದರಕ್ಕಿಂತ 50 ಹೆಚ್ಚಾಗಿದೆ.

💰 ಸರ್ಕಾರಿ ದರಕ್ಕಿಂತಲೂ ಹೆಚ್ಚಿನ ಬೆಲೆ!
ರಾಜ್ಯ ಸರ್ಕಾರವು ಈ ಮೊದಲು ಒಂದು ಟನ್ ಕಬ್ಬಿಗೆ ₹3,300 ನೀಡುವಂತೆ ನಿಗದಿ ಮಾಡಿತ್ತು. ಆದರೆ, ಸ್ವರೂಪ ಮಹಾದೇವರಾವ್ ಮಹಾಡಿಕ್ ಒಡೆತನದ ವೆಂಕಟೇಶ್ವರ ಸಕ್ಕರೆ ಕಾರ್ಖಾನೆಯು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚುವರಿ ₹50 ನೀಡಲು ಒಪ್ಪಿಗೆ ನೀಡಿದೆ.

ಮುಖ್ಯಮಂತ್ರಿಗಳ ಮಾತು ಈಗ ಅಧಿಕೃತ
ಈ ನಿರ್ಧಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದಿನ ಹೇಳಿಕೆಗೆ ಅನುಗುಣವಾಗಿದೆ. ಸಿಎಂ ಅವರು ಈ ಹಿಂದೆ, ಕಬ್ಬು ಬೆಳೆಗಾರರಿಗೆ ಕಾರ್ಖಾನೆ ಮಾಲೀಕರು ಹೆಚ್ಚುವರಿ ₹50 ನೀಡಬೇಕು ಮತ್ತು ಸರ್ಕಾರವು ಹೆಚ್ಚುವರಿ ₹50 ನೀಡಲಿದೆ ಎಂದು ತಿಳಿಸಿದ್ದರು.

ನಿರ್ಧಾರ ಹೀಗಿತ್ತು:

10.25% ಇಳುವರಿಗೆ (ರಿಕವರಿಗೆ ): ₹3,100 + ₹100 ಸೇರಿ ₹3,200

11.25% ಇಳುವರಿಗೆ (ರಿಕವರಿಗೆ ): ₹3,200 + ₹100 ಸೇರಿ ₹3,300

ಮಾಲೀಕರ ಎದುರೇ ಈ ಬಗ್ಗೆ ನಿರ್ಧಾರ ಮಾಡಿರುವುದಾಗಿ ಮತ್ತು ‘ಹೇಳಿರೋದೊಂದು ಮಾಡಿರೋದೊಂದು ಅಲ್ಲ’ ಎಂದು ಸಿಎಂ ಸ್ಪಷ್ಟಪಡಿಸಿದ್ದರು. ಜೂಮ್ ಮೀಟಿಂಗ್‌ನಲ್ಲಿ ಜಿಲ್ಲಾಧಿಕಾರಿಗಳು ಹೇಳಿದ ನಂತರವೇ ಮಾಲೀಕರು ₹3,200 ದರಕ್ಕೆ ಒಪ್ಪಿಕೊಂಡಿದ್ದರು ಎಂಬ ಅಂಶವನ್ನು ಸಹ ಸಿಎಂ ಉಲ್ಲೇಖಿಸಿದ್ದರು. ಇದೀಗ ಸರ್ಕಾರ ಈ ನಿರ್ಧಾರವನ್ನು ಅಧಿಕೃತಗೊಳಿಸಿದೆ.

error: Content is protected !!