Monday, November 10, 2025

Rice series 22 | ಹೆಚ್ಚು ಟೈಮ್ ಬೇಡ, ಫಟಾಫಟ್ ಅಂತ ರೆಡಿ ಆಗುತ್ತೆ ಈ ಕರಿಬೇವು ಚಿತ್ರಾನ್ನ

ದಿನನಿತ್ಯದ ಊಟದಲ್ಲಿ ಬದಲಾವಣೆ ಬೇಕಾದಾಗ ಚಿತ್ರಾನ್ನ ಒಂದು ಬೆಸ್ಟ್ ಆಯ್ಕೆ. ಆದರೆ ನಿಮಗೆ ಗೊತ್ತಿದ್ಯಾ ಕರಿಬೇವಿನಿಂದ ಕೂಡಾ ರುಚಿಕರವಾದ ಚಿತ್ರಾನ್ನ ತಯಾರಿಸಬಹುದು! ಕರಿಬೇವು ಚಿತ್ರಾನ್ನವು ಕೇವಲ ರುಚಿಯಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ಬೇಕಾಗುವ ಪದಾರ್ಥಗಳು:

ಅನ್ನ – 1 ಕಪ್
ಕರಿಬೇವು ಎಲೆಗಳು – 1 ಕಪ್
ಹುರಿದ ಕಡಲೆಕಾಯಿ – 2 ಟೇಬಲ್ ಸ್ಪೂನ್
ಹಸಿಮೆಣಸು – 3
ಒಣ ಮೆಣಸು – 2
ಜೀರಿಗೆ – 1 ಟೀ ಸ್ಪೂನ್
ಸಾಸಿವೆ – 1 ಟೀ ಸ್ಪೂನ್
ಉದ್ದಿನ ಬೇಳೆ – 1 ಟೀ ಸ್ಪೂನ್
ತುಪ್ಪ ಅಥವಾ ಎಣ್ಣೆ – 2 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಹುಣಸೆಹಣ್ಣು ಪೇಸ್ಟ್ – 1 ಟೇಬಲ್ ಸ್ಪೂನ್ (ಐಚ್ಛಿಕ)
ಹಿಂಗು – ಚಿಟಿಕೆ

ಮಾಡುವ ವಿಧಾನ:

ಮೊದಲು ಕರಿಬೇವು ಎಲೆಗಳನ್ನು ತೊಳೆದು ಒಣಗಿಸಿ. ಒಂದು ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಹಾಕಿ, ಕರಿಬೇವು, ಹಸಿಮೆಣಸು, ಒಣ ಮೆಣಸು ಹಾಗೂ ಜೀರಿಗೆಗಳನ್ನು ಹುರಿಯಿರಿ. ಸ್ವಲ್ಪ ತಣ್ಣಗಾದ ಮೇಲೆ ಈ ಎಲ್ಲವನ್ನು ಮಿಕ್ಸರ್‌ನಲ್ಲಿ ಹುರಿದ ಕಡಲೆಕಾಯಿಯ ಜೊತೆಗೆ ಹಾಕಿ ರುಬ್ಬಿ ಪೇಸ್ಟ್ ಮಾಡಿ.

ಒಂದು ಪ್ಯಾನ್‌ನಲ್ಲಿ ತುಪ್ಪ ಅಥವಾ ಎಣ್ಣೆ ಬಿಸಿ ಮಾಡಿ. ಅದಕ್ಕೆ ಸಾಸಿವೆ, ಉದ್ದಿನ ಬೇಳೆ ಮತ್ತು ಹಿಂಗು ಹಾಕಿ ಒಗ್ಗರಣೆ ಮಾಡಿ. ಈ ಒಗ್ಗರಣೆಗೆ ರುಬ್ಬಿದ ಕರಿಬೇವು ಪೇಸ್ಟ್ ಸೇರಿಸಿ ಚೆನ್ನಾಗಿ ಕುದಿಸಿ. ಬಳಿಕ ಹುಣಸೆಹಣ್ಣು ಪೇಸ್ಟ್ ಮತ್ತು ಉಪ್ಪು ಸೇರಿಸಿ. ಈಗ ಅನ್ನವನ್ನು ಹಾಕಿ ಕಲಸಿ.

ಎಲ್ಲವು ಚೆನ್ನಾಗಿ ಮಿಶ್ರಣವಾದ ಬಳಿಕ 2 ನಿಮಿಷದವರೆಗೆ ಮುಚ್ಚಿ ಬೇಯಿಸಿ. ನಂತರ ಬಿಸಿ ಬಿಸಿ ಕರಿಬೇವು ಚಿತ್ರಾನ್ನವನ್ನು ಸರ್ವ್ ಮಾಡಿ.

error: Content is protected !!