Tuesday, November 11, 2025

ಶಾಲೆಯಲ್ಲಿ ಸಹಪಾಠಿಗಳಿಂದಲೇ ರ‍್ಯಾಗಿಂಗ್: ಅಪ್ರಾಪ್ತ ಬಾಲಕನ ಮರ್ಮಾಂಗಕ್ಕೆ ಒದ್ದು ಹಲ್ಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಿಲ್ಲೆಯ ಪ್ರಸಿದ್ಧ ಖಾಸಗಿ ಶಾಲೆಯೊಂದರಲ್ಲಿ ಅಪ್ರಾಪ್ತ ಬಾಲಕನ ಮೇಲೆ ಸಹಪಾಠಿಗಳೇ ರ‍್ಯಾಗಿಂಗ್ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಕ್ಟೋಬರ್‌ 25ರಂದು ನಡೆದ ಈ ಕೃತ್ಯದಲ್ಲಿ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಮಾಹಿತಿಯ ಪ್ರಕಾರ, 8ನೇ ತರಗತಿಯ ಲೀಡರ್ ಆಗಿದ್ದ 13 ವರ್ಷದ ಬಾಲಕನನ್ನು ಶಾಲೆಯ ಮೂವರು ವಿದ್ಯಾರ್ಥಿಗಳು ನಿರಂತರವಾಗಿ ಹಣ ತರಲೆಂದು, ಮೊಬೈಲ್ ತರಲೆಂದು ಒತ್ತಾಯಿಸುತ್ತಿದ್ದರು. ಅವರ ಹೇಳಿದಂತೆ ನಡೆದುಕೊಳ್ಳದಿದ್ದರೆ ಹಲ್ಲೆ ಮಾಡುವ ಬೆದರಿಕೆ ನೀಡುತ್ತಿದ್ದರು. ಅಕ್ಟೋಬರ್‌ 25ರಂದು ಇದೇ ವಿಚಾರವಾಗಿ ಮೂವರು ಆರೋಪಿಗಳು ಬಾಲಕನನ್ನು ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ.

ಈ ವೇಳೆ ಬಾಲಕನ ಮೇಲೆ ದೈಹಿಕ ಹಿಂಸೆ ನಡೆಸಿ, ಅವನ ಗುಪ್ತಾಂಗಕ್ಕೆ ತೀವ್ರ ಗಾಯಗೊಳಿಸಿರುವುದು ಪತ್ತೆಯಾಗಿದೆ. ಗಾಯದ ತೀವ್ರತೆಯಿಂದ ಬಾಲಕ ಆಸ್ಪತ್ರೆಗೆ ದಾಖಲಾಗಿದ್ದು, ಪೋಷಕರು ಮತ್ತು ಶಾಲಾ ಆಡಳಿತದವರು ಘಟನೆಯ ಕುರಿತು ಮಾತಾಡಲು ಹಿಂಜರಿಯುತ್ತಿದ್ದಾರೆ.

ಅಪ್ರಾಪ್ತರ ನಡುವಿನ ಇಂತಹ ಹಿಂಸಾತ್ಮಕ ವರ್ತನೆ ಶಿಕ್ಷಣ ಸಂಸ್ಥೆಗಳ ಸುರಕ್ಷತೆ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ. ಘಟನೆಯ ತನಿಖೆಗೆ ಮಕ್ಕಳ ಹಕ್ಕು ಆಯೋಗ ಮತ್ತು ಶಿಕ್ಷಣ ಇಲಾಖೆಯು ತುರ್ತು ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

error: Content is protected !!