January15, 2026
Thursday, January 15, 2026
spot_img

ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್: ಬನವಾಸಿಯಲ್ಲಿ ಓರ್ವನ ಬಂಧನ

ಹೊಸ ದಿಗಂತ ವರದಿ,ಬನವಾಸಿ:

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸಮಾಜದಲ್ಲಿ ಶಾಂತಿಭಂಗ ತರಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಭಾನುವಾರ ಬನವಾಸಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಮೀಪದ ಹೆಬ್ಬತ್ತಿ ಗ್ರಾಮದ ಮುಜಾಫರ್ ಜಾಫರ್ ಖಾನ್ ಎಂಬಾತನು ತನ್ನ ಮೊಬೈಲ್ ನಲ್ಲಿ ಅನ್ಯ ಕೋಮಿನ ಜನರಲ್ಲಿ ದ್ವೇಷ ಭಾವನೆ ಹಾಗೂ ವೈಮನಸ್ಸು ಉಂಟುಮಾಡುವ ಉದ್ದೇಶದಿಂದ ಆರ್.ಎಸ್.ಎಸ್. ಮತ್ತು ಹಿಂದು ಧರ್ಮದ ಕುರಿತು ಅವಹೇಳನಕಾರಿ ಸ್ಟೇಟಸ್ ಹಾಕಿದ್ದು, ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಭಾನುವಾರ ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

Most Read

error: Content is protected !!