ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್‌ನ ನಟಿ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ ಸಿನಿಮಾ ‘ದಿ ಗರ್ಲ್‌ಫ್ರೆಂಡ್’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಆರಂಭ ದಾಖಲಿಸಿದೆ. ರಾಹುಲ್ ರವೀಂದ್ರನ್ ನಿರ್ದೇಶನದ ಈ ಲವ್ ಸ್ಟೋರಿ, ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲೇ ಪ್ರೇಕ್ಷಕರ ಮನಗೆದ್ದು ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಗಳಿಕೆ ಕಂಡಿದೆ. ಮೊದಲ ಎರಡು ದಿನಗಳಲ್ಲಿ 3.8 ಕೋಟಿ ರೂ. ವಸೂಲಿ ಮಾಡಿದ ಚಿತ್ರವು ಮೂರನೇ ದಿನ 3 ಕೋಟಿ ರೂ. ಗಳಿಕೆ ದಾಖಲಿಸಿದ್ದು, ಮೂರು ದಿನಗಳಲ್ಲಿ ಒಟ್ಟು 6.8 ಕೋಟಿ ರೂ. ವಸೂಲಿ ಮಾಡಿದೆ.
ವರದಿಗಳ ಪ್ರಕಾರ, ಚಿತ್ರದ ತೆಲುಗು ಆವೃತ್ತಿಯು ಬಾಕ್ಸ್ ಆಫೀಸ್‌ನಲ್ಲಿ ಸಿಂಹಪಾಲು ಗಳಿಸಿದ್ದು, ಭಾನುವಾರ ಶೇಕಡಾ 37 ರಷ್ಟು ಆಕ್ಯುಪೆನ್ಸಿ ದಾಖಲಾಗಿದೆ. ಮಧ್ಯಾಹ್ನ ಹಾಗೂ ಸಂಜೆ ಪ್ರದರ್ಶನಗಳು ಶೇಕಡಾ 46ರಷ್ಟು ತುಂಬಿಕೊಂಡು, ರಶ್ಮಿಕಾ ಅವರ ಕ್ರೇಜ್ ಮತ್ತೊಮ್ಮೆ ಸಾಬೀತಾಗಿದೆ.
ಚಿತ್ರದ ಕಥೆ ಭೂಮಾ (ರಶ್ಮಿಕಾ) ಎಂಬ ಯುವತಿಯ ಜೀವನದ ಸುತ್ತ ಹೆಣೆದಿದ್ದು, ಪ್ರೀತಿ, ನೋವು ಹಾಗೂ ಸ್ವಾತಂತ್ರ್ಯದ ನಡುವಿನ ಹೋರಾಟವನ್ನು ಆಳವಾಗಿ ಚಿತ್ರಿಸಿದೆ. ರಶ್ಮಿಕಾ ಮಂದಣ್ಣ ಅವರ ಭಾವನಾತ್ಮಕ ಅಭಿನಯ ಪ್ರೇಕ್ಷಕರ ಮನ ಸೆಳೆದಿದ್ದು, ವಿಮರ್ಶಕರಿಂದಲೂ ಭಾರೀ ಮೆಚ್ಚುಗೆ ಪಡೆದಿದೆ. ಧೀಕ್ಷಿತ್ ಶೆಟ್ಟಿ ಅವರ ನಿಖರ ಅಭಿನಯ, ಪಾತ್ರದ ಆಂತರಿಕ ಸಂಘರ್ಷವನ್ನು ಜೀವಂತಗೊಳಿಸಿದ್ದು, ಚಿತ್ರದ ಭಾವನಾತ್ಮಕ ತೀವ್ರತೆಯನ್ನು ಹೆಚ್ಚಿಸಿದೆ.

