ಮ್ಯಾಗಿ ಅಂದರೆ ಎಲ್ಲರಿಗೂ ಪ್ರಿಯವಾದ ತಕ್ಷಣ ತಯಾರಾಗುವ ಸ್ನ್ಯಾಕ್. ಆದರೆ, ಯಾವಾಗಲೂ ಅದೇ ರೀತಿ ಮ್ಯಾಗಿ ತಿನ್ನೋದು ಬೋರ್ ಆಗುತ್ತೆ. ಆಗ ಈ ಹೊಸ ಟ್ವಿಸ್ಟ್ ಟ್ರೈ ಮಾಡಿ ನೋಡಿ – ಮ್ಯಾಗಿ ಭೇಲ್! ಇದು ಚಾಟ್ ಸ್ಟೈಲ್‌ನಲ್ಲಿ ತಯಾರಿಸುವ ಕ್ರಂಚಿ, ಸ್ಪೈಸಿ ಮತ್ತು ಟೇಸ್ಟಿ ಸ್ನ್ಯಾಕ್. ಸಂಜೆ ಟೀ ಜೊತೆಗೆ ಅಥವಾ ಅತಿಥಿಗಳಿಗೆ ಸರ್ಪ್ರೈಸ್ ಆಗಿ ಸರ್ವ್ ಮಾಡಲು ಸೂಕ್ತ.
ಬೇಕಾಗುವ ಪದಾರ್ಥಗಳು:
ಮ್ಯಾಗಿ – 1 ಪ್ಯಾಕೆಟ್
ಮ್ಯಾಗಿ ಮಸಾಲಾ – 1 ಪ್ಯಾಕೆಟ್
ಟೊಮ್ಯಾಟೊ – 1
ಈರುಳ್ಳಿ – 1
ಹಸಿಮೆಣಸು – 1
ಕೊತ್ತಂಬರಿ ಸೊಪ್ಪು – ಸ್ವಲ್ಪ
ನಿಂಬೆ ರಸ – 1 ಟೀ ಚಮಚ
ಭುಜಿಯಾ ಅಥವಾ ಸೇವ್ – 2 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ಎಣ್ಣೆ – 1 ಟೀ ಚಮಚ (ಮ್ಯಾಗಿ ಹುರಿಯಲು)
ತಯಾರಿಸುವ ವಿಧಾನ:
ಮೊದಲಿಗೆ ಹಸಿ ಮ್ಯಾಗಿಯನ್ನು ಸಣ್ಣ ಸಣ್ಣ ತುಂಡುಗಳಾಗಿ ಮುರಿದು, ಸ್ವಲ್ಪ ಎಣ್ಣೆಯಲ್ಲಿ ಹುರಿಯಿರಿ. ಅದು ಗೋಲ್ಡನ್ ಕಲರ್ ಆಗುತ್ತಿದ್ದಂತೆ ಸ್ಟೌವ್ ಆಫ್ ಮಾಡಿ ತಣ್ಣಗಾಗಲು ಬಿಡಿ.
ಒಂದು ದೊಡ್ಡ ಬೌಲ್‌ನಲ್ಲಿ ಈರುಳ್ಳಿ, ಟೊಮ್ಯಾಟೊ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಅದಕ್ಕೆ ಹುರಿದ ಮ್ಯಾಗಿ ಮತ್ತು ಮ್ಯಾಗಿ ಮಸಾಲಾ ಸೇರಿಸಿ ಮಿಕ್ಸ್ ಮಾಡಿ. ಕೊನೆಗೆ ಭುಜಿಯಾ ಅಥವಾ ಸೇವ್ ಹಾಕಿ ಮಿಶ್ರಣ ಮಾಡಿ ತಕ್ಷಣ ಸರ್ವ್ ಮಾಡಿ.

