Monday, November 10, 2025

ಜೈಲಿನಲ್ಲಿ ರಾಜಾತಿಥ್ಯ: ಇದು ಕಾಂಗ್ರೆಸ್‌ನ ಹೊಸ ಗ್ಯಾರಂಟಿ ಎಂದ ಶೆಹಜಾದ್ ಪೂನಾವಾಲಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಜೈಲಿನಲ್ಲಿರುವ ಕೈದಿಗಳಿಗೆ ಐಷರಾಮಿ ಸೌಲಭ್ಯಗಳನ್ನು ಒದಗಿಸುತ್ತಿದೆ. ಇದು ಕಾಂಗ್ರೆಸ್‌ನ ಹೊಸ ಗ್ಯಾರಂಟಿ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಆರೋಪಿಸಿದ್ದಾರೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಹೈ-ರಿಸ್ಕ್ ಕೈದಿಗಳಿಗೆ ಅನಧಿಕೃತ ಸೌಲಭ್ಯಗಳು ಒದಗಿಸಲಾಗುತ್ತಿದೆ ಎನ್ನುವ ವರದಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಉಗ್ರವಾದದ ಮೇಲೆ ಸಾಫ್ಟ್ ಕಾರ್ನರ್ ತೋರಿಸುತ್ತಿದೆ. ಇದು ಜೈಲನ್ನು ಪಾರ್ಟಿ ಹೌಸ್ ಆಗಿ ಪರಿವರ್ತಿಸುವ ಕಾಂಗ್ರೆಸ್‌ನ ಹೊಸ ಗ್ಯಾರಂಟಿ ಎಂದರು.

ಜೈಲಿನ ಒಳಗಿನಿಂದ ರೆಕಾರ್ಡ್ ಆದಂತೆ ಕಾಣುವ ವಿಡಿಯೋ ಕ್ಲಿಪ್‌ಗಳನ್ನು ಪ್ರದರ್ಶಿಸಿದ ಅವರು, ಐಸಿಸ್ ರಿಕ್ರೂಟರ್ ಎಂದು ಹೇಳಲಾದ ಝುಹಾಬ್ ಹಮೀದ್ ಶಕೀಲ್ ಮನ್ನಾ ಮೊಬೈಲ್ ಫೋನ್ ಬಳಸುತ್ತಿರುವುದು ಕಂಡುಬಂದಿದೆ. ಇಂತಹ ಉಗ್ರರನ್ನು ಹೈ-ಸೆಕ್ಯುರಿಟಿ ಸೆಲ್‌ಗಳಲ್ಲಿ ಇರಿಸಬೇಕು. ಆದರೆ ಅವರು ಫೋನ್ ಬಳಸಿ ಹೊರಗೆ ಸಂಪರ್ಕಿಸುತ್ತಾ ರಿಕ್ರೂಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

error: Content is protected !!