ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಮಲ ತಿರುಪತಿ ದೇವಸ್ಥಾನಕ್ಕೆ ತುಪ್ಪ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ವರ್ಷಗಳಿಗೂ ಹೆಚ್ಚು ಕಾಲ ಕಲಬೆರಕೆ ತುಪ್ಪವನ್ನು ಪೂರೈಸಲಾಗಿದೆ ಎಂದು ವಿಶೇಷ ತನಿಖಾ ತಂಡ (SIT) ತಿಳಿಸಿದೆ.
ಎಸ್‌ಐಟಿ ನಡೆಸಿರುವ ತನಿಖೆ ವೇಳೆ ತುಪ್ಪದಲ್ಲಿ ರಾಸಾಯನಿಕ ಬಳಕೆಯಾಗಿರೋದು ಪತ್ತೆಯಾಗಿದೆ. ಟಿಟಿಡಿಗೆ ತುಪ್ಪ ಪೂರೈಸುವ ಒಪ್ಪಂದ ಮಾಡಿಕೊಂಡಿದ್ದ ಖಾಸಗಿ ಕಂಪನಿಯು ಡೈರಿಯಲ್ಲಿ ಮೊನೊಡಿಗ್ಲಿಸರೈಡ್‌ಗಳು ಮತ್ತು ಅಸಿಟಿಕ್ ಆಸಿಡ್ ಎಸ್ಟರ್‌ನಂತಹ ರಾಸಾಯನಿಕಗಳು ಬಳಕೆಯಾಗಿರುವುದು ತಿಳಿದುಬಂದಿದೆ.
2019 ಮತ್ತು 2024ರ ನಡುವೆ ಟಿಟಿಡಿಗೆ ಅಂದಾಜು 68 ಲಕ್ಷ ಕಿಲೋಗ್ರಾಂಗಳಷ್ಟು ತುಪ್ಪವನ್ನು ಪೂರೈಸಿದ್ದು, ಒಟ್ಟು 250 ಕೋಟಿ ರೂ. ಮೌಲ್ಯದ ತುಪ್ಪವನ್ನು ಮಾರಾಟ ಮಾಡಿದೆ ಎಂದು ನೆಲ್ಲೂರಿನ ಎಸಿಬಿ ನ್ಯಾಯಾಲಯಕ್ಕೆ ಸಲ್ಲಿಸಿದ ತನ್ನ ರಿಮಾಂಡ್ ವರದಿಯಲ್ಲಿ ಎಸ್‌ಐಟಿ ಉಲ್ಲೇಖಿಸಿದೆ.

