ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವ ಮಧುಮೇಹ ದಿನದ ಅಂಗವಾಗಿ, ಮಂಗಳೂರಿನ ಕೆಎಂಸಿ ಆಸ್ಪತ್ರೆಯು ನ. 15ರಂದು ಶನಿವಾರ ಮಧ್ಯಾಹ್ನ 3.30 ರಿಂದ ಆಸ್ಪತ್ರೆಯ ಟವರ್ 2 ರ ನೆಲ ಮಹಡಿ ಯಲ್ಲಿ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಆಯೋಜಿಸಿದೆ.
ಈ ಕಾರ್ಯಕ್ರಮವು ಆರೋಗ್ಯ ಜಾಗೃತಿ ಉತ್ತೇಜಿಸುವ ಹಾಗೂ ಭಾರತ ಮತ್ತು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಮಧುಮೇಹದ ಬಗ್ಗೆ ಅರಿವು ಮೂಡಿಸುವ ಹಾಗೂ ಸಮುದಾಯವನ್ನು ಸಬಲೀಕರಣಗೊಳಿಸುವ ಆಸ್ಪತ್ರೆಯ ನಿರಂತರ ಬದ್ಧತೆಯ ಭಾಗವಾಗಿದೆ. ಸಾರ್ವಜನಿಕರಿಗೆ ಈ ಕಾರ್ಯಕ್ರಮವು ಮುಕ್ತವಾಗಿದೆ.
ಮಧುಮೇಹದ ಕಾರಣಗಳು, ಅಪಾಯಕಾರಿ ಅಂಶಗಳು ಮತ್ತು ತಡೆಗಟ್ಟುವ ಅಂಶಗಳ ಬಗ್ಗೆ ಸಾರ್ವಜನಿಕರಿಗೆ ಅಗತ್ಯ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ. ಇದು ವಿಶೇಷವಾಗಿ ಹಿರಿಯ ನಾಗರಿಕರು, ಜಡ ಜೀವನಶೈಲಿ ಹೊಂದಿರುವವರು ಮತ್ತು ಮಧುಮೇಹದ ಕೌಟುಂಬಿಕ ಇತಿಹಾಸ ಹೊಂದಿರುವವರಿಗೆ ಪ್ರಸ್ತುತವಾಗಿದೆ. ಕಾರ್ಯಕ್ರಮದಲ್ಲಿ ವೈದ್ಯಕೀಯ ತಜ್ಞರನ್ನು ಭೇಟಿಯಾಗಿ ಸಮಾಲೋಚನೆ ಮಾಡಬಹುದು.
ತಜ್ಞ ವೈದ್ಯರುಗಳು ಮಧುಮೇಹದಲ್ಲಿ ಆಧುನಿಕ ಜೀವನಶೈಲಿ, ಒತ್ತಡ ಮತ್ತು ಬೊಜ್ಜು ಪಾತ್ರ, ಜಂಕ್ ಫುಡ್‌ಗಳು ಮತ್ತು ಸಕ್ಕರೆ ಪಾನೀಯಗಳು ರಕ್ತದಲ್ಲಿನ ಸಕ್ಕರೆ ಮಟ್ಟಗಳ ಮೇಲೆ ಬೀರುವ ಪರಿಣಾಮಗಳು, ಮತ್ತು ಡಯಾಬಿಟಿಸ್ ಹೊಂದಿರುವ ವ್ಯಕ್ತಿಗಳಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ ಪೂರ್ವ ಮತ್ತು ಮೂತ್ರದ ಸೋಂಕುಗಳ ನಡುವಿನ ಸಂಬಂಧದಂತಹ ವಿಷಯಗಳ ಕುರಿತು ಒಳನೋಟಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳುತ್ತಾರೆ. ಈ ಅವಕಾಶವನ್ನು ಕಳೆದುಕೊಳ್ಳದೆ, 9008167071 ಗೆ ತಮ್ಮ ಹೆಸರನ್ನು ಕಳುಹಿಸುವ ಮೂಲಕ ತಮ್ಮನ್ನು ನೋಂದಾಯಿಸಿಕೊಳ್ಳುವಂತೆ ಸಾರ್ವಜನಿಕರನ್ನು ಕೋರುತ್ತೇವೆ. ನೋಂದಣಿ ಉಚಿತ ಆದರೆ ಕಡ್ಡಾಯವಾಗಿದೆ.
ಈ ಮೂಲಕ, ಜನರು ತಮ್ಮ ಆರೋಗ್ಯದ ಕಡೆಗೆ ಪೂರ್ವಭಾವಿ ಕ್ರಮಗಳ ಅಳವಡಿಸಿಕೊಳ್ಳಲು ಮತ್ತು ಮಧುಮೇಹವನ್ನು ಮುಂಗಡವಾಗಿ ಪತ್ತೆ ಹಚ್ಚುವ ಮತ್ತು ನಿರ್ವಹಿಸುವುದನ್ನು ಪ್ರೋತ್ಸಾಹಿಸಲು ಆಸ್ಪತ್ರೆಯು ಪ್ರಯತ್ನಿಸುತ್ತದೆ. ಕಾರ್ಯಕ್ರಮದಲ್ಲಿ ಮಧುಮೇಹ ಸ್ನೇಹಿ ಆಹಾರ ಪದಾರ್ಥಗಳ ಪ್ರದರ್ಶನವನ್ನು ಪಾಕವಿಧಾನಗಳ ಬಗ್ಗೆ ಕೂಡ ಮಾಹಿತಿ ನೀಡಲಾಗುವುದು ಹಾಗೂ ರೋಗಿಗಳ ಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುವ ಆರೋಗ್ಯಕರ ಆಹಾರ ಆಯ್ಕೆಗಳ ಪ್ರದರ್ಶನ ನಡೆಸಲಾಗುವುದು.
ಕೆಎಂಸಿ ಆಸ್ಪತ್ರೆ ಮಂಗಳೂರು ಪ್ರಾದೇಶಿಕ ಮುಖ್ಯ ಕಾರ್ಯಾನಿರ್ವಹಣಾಧಿಕಾರಿ ಶ್ರೀ ಸಘೀರ್ ಸಿದ್ಧಿಕಿ ಮಾತನಾಡಿ, , “ಮಧುಮೇಹವು ಇಂದಿನ ಆರೋಗ್ಯಯುತ ಜೀವನಕ್ಕಿರುವ ಸವಾಲುಗಳ ಪೈಕಿ ಒಂದು. ಆದರೆ ಸರಿಯಾದ ಅರಿವು ಮತ್ತು ಜೀವನಶೈಲಿಯ ಆಯ್ಕೆಗಳೊಂದಿಗೆ ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು. ನಾವು ಕೆಎಂಸಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಆರೋಗ್ಯಕರ, ಹೆಚ್ಚು ಸಮತೋಲಿತ ಜೀವನ ನಡೆಸಲು ಜ್ಞಾನ ಮತ್ತು ಪ್ರಾಯೋಗಿಕ ಮಾರ್ಗದರ್ಶನ ನೀಡುವ ಗುರಿಯನ್ನು ಹೊಂದಿದ್ದೇವೆ. ಈ ಕಾರ್ಯಕ್ರಮವು ಡಯಾಬಿಟಿಸ್ ಅನ್ನು ತಡೆಗಟ್ಟುವಿಕೆ ಮತ್ತು ಯೋಗಕ್ಷೇಮ ಕಾಪಾಡಿಕೊಳ್ಳುವ ನಮ್ಮ ಬದ್ಧತೆಯನ್ನು ಸಾಬೀತು ಮಾಡುತ್ತದೆ” ಎಂದು ಹೇಳಿದರು.
ಈ ಕಾರ್ಯಕ್ರಮದ ಮೂಲಕ , ಕೆಎಂಸಿ ಆಸ್ಪತ್ರೆಯು ಸಮುದಾಯ ಆರೋಗ್ಯ, ಮುಂಜಾಗ್ರತ ಆರೋಗ್ಯ ಸೇವೆ ಮತ್ತು ಜಾಗೃತಿ ಮೂಡಿಸುವ ಮೂಲಕ ದೀರ್ಘಕಾಲದ ಕ್ಷೇಮಕ್ಕಾಗಿ ಆರೋಗ್ಯಕರ ಜೀವನಶೈಲಿ ಉತ್ತೇಜಿಸುವ ಬದ್ದತೆಯನ್ನು ಪುನರುಚ್ಚರಿಸುತ್ತದೆ.

