ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾರ್ವಜನಿಕರಿಂದ ಸುಲಿಗೆ ಮಾಡುವಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಮಣಿಪುರದ ವಿವಿಧ ಜಿಲ್ಲೆಗಳಿಂದ ಒಬ್ಬ ಮಹಿಳೆ ಸೇರಿದಂತೆ ವಿವಿಧ ನಿಷೇಧಿತ ಸಂಘಟನೆಗಳಿಗೆ ಸೇರಿದ ಮೂವರು ಉಗ್ರರನ್ನು ಬಂಧಿಸಲಾಗಿದೆ.
ಕಾಕ್ಚಿಂಗ್ ಜಿಲ್ಲೆಯ ಲಮ್ಜಾವೊ ಮಖಾ ಲೈಕೈ ಎಂಬಲ್ಲಿ ನಿಷೇಧಿತ ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (ಕೆ) ಸಂಘಟನೆಯ ಸಕ್ರಿಯ ಕಾರ್ಯಕರ್ತನನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.
ಬಂಧಿತನನ್ನು 40 ವರ್ಷದ ನಿಂಗ್ತೌಜಮ್ ಇನೋಚಾ ಎಂದು ಗುರುತಿಸಲಾಗಿದ್ದು, ಆತನಿಂದ ಒಂದು .32 ಪಿಸ್ತೂಲ್, ಮ್ಯಾಗಜೀನ್ ಮತ್ತು ಮೂರು ಕಾರ್ಟ್ರಿಡ್ಜ್‌ಗಳು ಮತ್ತು 41,200 ರೂ. ನಗದು ವಶಪಡಿಸಿಕೊಳ್ಳಲಾಗಿದೆ.

