Thursday, November 13, 2025

ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವು

ಹೊಸದಿಗಂತ ವರದಿ, ಮಡಿಕೇರಿ:

ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವಿಗೀಡಾಗಿರುವ ಬಗ್ಗೆ ವರದಿಯಾಗಿದೆ.

ಪ್ರಾಥಮಿಕ ವರದಿಗಳ ಪ್ರಕಾರ ಮೃತಪಟ್ಟವರು ಮಡಿಕೇರಿ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳೆಂದು ತಿಳಿದು ಬಂದಿದ್ದು, ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ.

ಕಾಲೇಜಿನ‌ ಚಂಗಪ್ಪ (19) ಹಾಗೂ ತರುಣ್ ತಿಮ್ಮಯ್ಯ ಮೃತ ವಿದ್ಯಾರ್ಥಿಗಳೆನ್ನಲಾಗಿದ್ದು, ಮತ್ತೋರ್ವ ವಿದ್ಯಾರ್ಥಿ ಜೀವ ಉಳಿಸಿಕೊಂಡಿದ್ದಾರೆ.
ಕಾಲೇಜಿನ‌ ಮೂವರು ವಿದ್ಯಾರ್ಥಿಗಳು ಹೇರೂರು ‌ಬುಧವಾರ ಮಧ್ಯಾಹ್ನ ಹೇರೂರು ಗ್ರಾಮದ ಹಾರಂಗಿ ಹಿನ್ನೀರಿನಲ್ಲಿ ಸ್ನಾನಕ್ಕೆಂದು ಇಳಿದಿದ್ದು, ಈ‌ ಪೈಕಿ ಇಬ್ಬರು ಮೇಲೆ ಬರಲಾಗದೆ ಜಲ ಸಮಾಧಿಯಾಗಿದ್ದಾರೆ.

ವಿಷಯ ತಿಳಿದ ಸುಂಟಿಕೊಪ್ಪ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದ್ದು, ಶವಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

error: Content is protected !!