Friday, November 14, 2025

ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವು: ಓರ್ವನ ಮೃತದೇಹ ಪತ್ತೆ

ಹೊಸದಿಗಂತ ವರದಿ, ಮಡಿಕೇರಿ:

ಬುಧವಾರ ಮಧ್ಯಾಹ್ನ ಹೇರೂರು ಸಮೀಪದ ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟ ಇಬ್ಬರು ವಿದ್ಯಾರ್ಥಿಗಳ ಪೈಕಿ ಒಬ್ಬನ ಮೃತದೇಹ ನೀರಿನಲ್ಲಿ ಪತ್ತೆ ಆಗಿದೆ.

ಮಡಿಕೇರಿ ಜೂನಿಯರ್ ಕಾಲೇಜಿನ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿ, ಹೆಬ್ಬಟಗೇರಿಯ ಪೂವಯ್ಯ ಎಂಬುವವರ ಪುತ್ರ ಚಂಗಪ್ಪ (17) ರವರ ಮೃತ ದೇಹವನ್ನು ಪತ್ತೆಹಚ್ಚಿ ನೀರಿನಿಂದ ಮೇಲಕ್ಕೆ ತರಲಾಗಿದೆ.

ಇದೇ ಕಾಲೇಜಿನ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿ, ಮಡಿಕೇರಿ ರಾಜಾಸೀಟ್ ನಿವಾಸಿ ತಿಮ್ಮಯ್ಯ ಅವರ ಪುತ್ರ ತರುಣ್ ತಮ್ಮಯ್ಯ (17) ಅವರ ಮೃತದೇಹ ಪತ್ತೆ ಆಗಿರುವುದಿಲ್ಲ. ಸಂಜೆ ಕತ್ತಲಾವರಿಸಿದ್ದರಿಂದ ಮತ್ತು ಈ ಪ್ರದಣೆಶದಲ್ಲಿ ಕಾಡಾನೆಗಳ ಹಾವಳಿ ಇರುವುದರಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಗುರುವಾರ ಮತ್ತೆ ಕಾರ್ಯಾಚರಣೆ ಮುಂದುವರಿಯಲಿದೆ.

error: Content is protected !!