ಇಂದಿನ ಮಾರುಕಟ್ಟೆಯಲ್ಲಿ ಅಸಲಿ ಜೇನುತುಪ್ಪ ಮತ್ತು ಕೃತಕ ಜೇನುತುಪ್ಪದ ನಡುವಿನ ವ್ಯತ್ಯಾಸ ಗೊತ್ತಾಗುವುದು ಕಷ್ಟವಾಗಿದೆ. ಹಲವರು ಆರೋಗ್ಯಕ್ಕಾಗಿ ದ ಸೇವಿಸುತ್ತಾರೆ, ಆದರೆ ನಕಲಿ ಜೇನು ಬಳಕೆ ದೇಹಕ್ಕೆ ಹಾನಿಕಾರಕವಾಗಬಹುದು. ಆದ್ದರಿಂದ, ಮನೆಯಲ್ಲೇ ಸರಳ ಪರೀಕ್ಷೆಗಳ ಮೂಲಕ ನಿಜವಾದ ಜೇನು ಗುರುತಿಸುವುದು ಅತ್ಯಂತ ಮುಖ್ಯ.
- ನೀರು ಪರೀಕ್ಷೆ: ಒಂದು ಗ್ಲಾಸ್ ನೀರಿನಲ್ಲಿ ಒಂದು ಚಮಚ ಜೇನು ಹಾಕಿ ನೋಡಿ. ನಿಜವಾದ ಜೇನುತುಪ್ಪ ತಳದಲ್ಲಿ ಕುಳಿತುಕೊಳ್ಳುತ್ತದೆ, ನಕಲಿ ಜೇನು ನೀರಿನಲ್ಲಿ ಕರಗುತ್ತದೆ.
- ಬೆಂಕಿ ಪರೀಕ್ಷೆ: ಕಾಟನ್ ಕಡ್ಡಿಯನ್ನು ಜೇನಿನಲ್ಲಿ ಮುಳುಗಿಸಿ, ನಂತರ ಬೆಂಕಿ ಹಚ್ಚಿ ನೋಡಿ. ನಿಜವಾದ ಜೇನು ಸುಲಭವಾಗಿ ಹೊತ್ತಿ ಉರಿಯುತ್ತದೆ, ಆದರೆ ನಕಲಿ ಜೇನು ತೇವದಿಂದ ಉರಿಯುವುದಿಲ್ಲ.
- ಕಾಗದ ಪರೀಕ್ಷೆ: ಜೇನಿನ ಕೆಲವು ಹನಿಗಳನ್ನು ಪೇಪರ್ ಮೇಲೆ ಹಾಕಿ ನೋಡಿ. ಅದು ಪೇಪರ್ ಒಳಗೆ ಹೀರಿಕೊಂಡರೆ ನಕಲಿ, ಮೇಲ್ಮೈಯಲ್ಲೇ ಉಳಿದರೆ ನಿಜವಾದದು.
- ಕ್ರಿಸ್ಟಲ್ ಪರೀಕ್ಷೆ: ನಿಜವಾದ ಜೇನು ಕೆಲವು ಸಮಯದ ನಂತರ ಕ್ರಿಸ್ಟಲ್ ಆಗುತ್ತದೆ, ಆದರೆ ನಕಲಿ ಜೇನು ಯಾವಾಗಲೂ ದ್ರವ ಸ್ಥಿತಿಯಲ್ಲೇ ಇರುತ್ತದೆ.
- ರುಚಿ ಮತ್ತು ವಾಸನೆ: ನಿಜವಾದ ಜೇನುಗೆ ಸುವಾಸನೆ ಹಾಗೂ ಸ್ವಲ್ಪ ಗರಿಗರಿಯಾದ ರುಚಿ ಇರುತ್ತದೆ, ನಕಲಿ ಜೇನು ತುಂಬ ಸಿಹಿಯಾಗಿರುತ್ತದೆ.

