ಇತ್ತೀಚಿನ ದಿನನಗಳಲ್ಲಿ ತೂಕ ಇಳಿಸೋಕೆ ಜನರು ಹಲವು ವಿಧಾನಗಳನ್ನು ಪ್ರಯತ್ನಿಸುತ್ತಿದ್ದಾರೆ. ಕೆಲವರು ಆಲಿವ್ ಆಯಿಲ್ ಬಳಸುತ್ತಾರೆ, ಇನ್ನಿಬ್ಬರು ತುಪ್ಪವನ್ನು ಆರೋಗ್ಯಕರ ಆಯ್ಕೆ ಎಂದು ಪರಿಗಣಿಸುತ್ತಾರೆ. ಆದರೆ ನಿಜವಾಗಿಯೂ ಈ ಎರಡರಲ್ಲಿ ತೂಕ ಇಳಿಸಲು ಯಾವುದು ಉತ್ತಮ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಮೂಡುತ್ತದೆ.
ಆಲಿವ್ ಆಯಿಲ್:
- ಆಲಿವ್ ಆಯಿಲ್‌ನಲ್ಲಿ ಮೋನೋಅನ್‌ಸ್ಯಾಚ್ಯುರೇಟೆಡ್ ಫ್ಯಾಟ್ಸ್ ಇರುವುದರಿಂದ ಇದು ಹೃದಯಕ್ಕೆ ಹಿತವಾಗಿದ್ದು, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
- ಇದು ಮೆಟಬಾಲಿಸಂ ಹೆಚ್ಚಿಸಿ ಕೊಬ್ಬಿನ ದಹನವನ್ನು ಉತ್ತೇಜಿಸುತ್ತದೆ. ಅದರಲ್ಲೂ ಎಕ್ಸ್ಟ್ರಾ ವರ್ಜಿನ್ ಆಲಿವ್ ಆಯಿಲ್ ಹೆಚ್ಚು ಶುದ್ಧವಾಗಿದ್ದು, ತೂಕ ಇಳಿಸುವಲ್ಲಿ ಸಹಕಾರಿ.
- ಜೊತೆಗೆ ಇದು ಅಂಟಿ ಆಕ್ಸಿಡೆಂಟ್‌ಗಳಲ್ಲಿಯೂ ಸಮೃದ್ಧವಾಗಿದೆ.
ತುಪ್ಪ:
- ತುಪ್ಪವೂ ಸಹ ಪ್ರಾಚೀನ ಕಾಲದಿಂದ ಆರೋಗ್ಯಕ್ಕೆ ಹಿತವಾದ ಅಂಶ ಎಂದು ಪರಿಗಣಿಸಲಾಗಿದೆ. ತುಪ್ಪದಲ್ಲಿ ಇರುವ ಕಾಂಜುಗೆಟೆಡ್ ಲಿನೋಲಿಕ್ ಆಸಿಡ್ (CLA) ದೇಹದ ಕೊಬ್ಬನ್ನು ಕರಗಿಸಲು ಸಹಾಯಮಾಡುತ್ತದೆ.
- ಇದು ಹಾರ್ಮೋನ್ ಸಮತೋಲನ ಕಾಯ್ದುಕೊಳ್ಳಲು ಸಹಕಾರಿಯಾಗಿದ್ದು, ಆಹಾರದ ಪೋಷಕಾಂಶಗಳನ್ನು ಶೋಷಿಸಲು ಸಹ ಸಹಾಯ ಮಾಡುತ್ತದೆ.
ಆದರೆ, ಇವೆರಡನ್ನೂ ಮಿತವಾಗಿ ಸೇವಿಸುವುದೇ ಮುಖ್ಯ. ಹೆಚ್ಚು ಪ್ರಮಾಣದಲ್ಲಿ ತೆಗೆದುಕೊಂಡರೆ ಅದು ತೂಕ ಹೆಚ್ಚುವಿಕೆಗೆ ಕಾರಣವಾಗಬಹುದು. ಆಲಿವ್ ಆಯಿಲ್ ಹೆಚ್ಚು ಹೃದಯ ಸ್ನೇಹಿ ಆಯ್ಕೆ ಆಗಿದ್ದರೆ, ತುಪ್ಪ ದೇಹದ ಒಳ ಅಂಗಗಳನ್ನು ಕಾಯ್ದುಕೊಳ್ಳುವಲ್ಲಿ ಸಹಕಾರಿಯಾಗುತ್ತದೆ.
ಒಟ್ಟಾರೆ, ತೂಕ ಇಳಿಸೋಕೆ ಯಾವ ಎಣ್ಣೆ ಉತ್ತಮ ಎನ್ನುವುದು ನಿಮ್ಮ ದೇಹದ ಪ್ರತಿಕ್ರಿಯೆ, ಆಹಾರ ಪದ್ಧತಿ ಮತ್ತು ವ್ಯಾಯಾಮದ ಮೇಲೆ ಅವಲಂಬಿತ. ಸರಿಯಾದ ಪ್ರಮಾಣದಲ್ಲಿ ಬಳಸಿದರೆ ಆಲಿವ್ ಆಯಿಲ್ ಮತ್ತು ತುಪ್ಪ ಎರಡೂ ನಿಮ್ಮ ತೂಕ ಇಳಿಸುವ ಪ್ರಯತ್ನಕ್ಕೆ ನೆರವಾಗುತ್ತವೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

