ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶ ಅಲಿಘಡದ ಶಹಾಪುರ್ ಖುತುಬ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬೆಳಗಿನ ಶಾಲಾ ಪ್ರಾರ್ಥನೆ ವೇಳೆ ರಾಷ್ಟ್ರಗೀತೆ ಹಾಡಲು ನಿರಾಕರಿಸಿದ್ದಾನೆ. ಇಷ್ಟೇ ಅಲ್ಲ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾನೆ. ಇದೀಗ ಈ ಮಾಹಿತಿ ತಿಳಿಯುತ್ತಿದ್ದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ತಕ್ಷಣವೇ ಶಾಲಾ ಶಿಕ್ಷನ ಅಮಾನತು ಮಾಡಿದ್ದಾರೆ.
ಅಲಿಘಡ ಜಿಲ್ಲೆಯ ಶಹಾಪುರ್ ಖುತುಬ್ ಹಿರಿಯ ಪ್ರಾಥಮಿಕ ಶಾಲೆ ಇದೀಗ ವಿವಾದದ ಕೇಂದ್ರವಾಗಿದೆ.
ಎಲ್ಲರೂ ಬೆಳಗ್ಗೆ ಶಾಲಾಗೆ ಹಾಜರಾಗಿದ್ದಾರೆ. ಎಲ್ಲಾ ಶಾಲೆಯಂತೆ ಇಲ್ಲೂ ಬೆಳಗ್ಗಿನ ಪ್ರಾರ್ಥನೆ ಇದೆ. ಈ ವೇಳೆ ರಾಷ್ಟ್ರಗೀತೆ ಹಾಡಲಾಗುತ್ತದೆ. ಆದರೆ ಸಂಶುಲ್ ಹಸನ್ ರಾಷ್ಟ್ರಗೀತೆ ಜನಗಣಮನ ಹಾಗೂ ದೇಶಭಕ್ತಿ ಗೀತೆ ವಂದೇ ಮಾತರಂ ಹಾಡಲು ನಿರಾಕರಿಸಿದ್ದಾರೆ. ಈ ಕಾರಣದಿಂದ ಬೆಳಗಿನ ಪ್ರಾರ್ಥನೆಯಲ್ಲೂ ಪಾಲ್ಗೊಳ್ಳಲು ನಿರಾಕರಿಸಿದ್ದಾರೆ. ಇಷ್ಟೇ ಅಲ್ಲ ರಾಷ್ಟ್ರಗೀತೆ ಹಾಗೂ ವಂದೇ ಮಾತರಂ ಹಾಡುವಾಗಲು ಗೌರವ ನೀಡಿಲ್ಲ. ಹೀಗಾಗಿ ವಿವಾದ ಜೋರಾಗಿದೆ.
ರಾಷ್ಟ್ರಗೀತೆ ಹಾಗೂ ವಂದೇ ಮಾತರಂ ಗೀತೆ ಕುರಿತು ವಿವಾದ ಮಾಹಿತಿ ಆಲಿಘಡ ಮೂಲ ಶಿಕ್ಷಣಧಿಕಾರಿ (BSA) ರಾಕೇಶ್ ಕುಮಾರ್ ಸಿಂಗ್‌ಗೆ ತಲುಪಿದೆ. ಪ್ರಾಥಮಿಕ ತನಿಖೆಯಲ್ಲಿ ಅಗೌರವ ತೋರಿರುವುದು ಸಾಬೀತಾಗಿದೆ. ಇದರ ಬೆನ್ನಲ್ಲೇ ಟೀಚರ್ ಸಂಶುಲ್ ಹಸನ್ ಅಮಾನತು ಮಾಡಿದ್ದಾರೆ.
ಶಿಕ್ಷಕ ವಿದ್ಯಾರ್ಥಿಗಳಿಗೆ ಮಾದರಿಯಾಗಿರಬೇಕು, ಆದರೆ ಇಲ್ಲಿ ಶಿಕ್ಷಣ ನಿಯಮ ಉಲ್ಲಂಘಿಸಿದ್ದಾರೆ. ಸುಖಾಸುಮ್ಮನೆ ವಿವಾದ ಸೃಷ್ಟಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಗೊಂದಲ, ಪೋಷಕರಲ್ಲಿ ಆತಂಕ ಸಷ್ಟಿಸಿದ್ದಾರೆ. ರಾಷ್ಟ್ರಗೀತೆ, ರಾಷ್ಟ್ರಧ್ವಜ, ದೇಶಕ್ಕೆ ಮಾಡುವ ಅಪಮಾನ ಸಣ್ಣ ವಿಚಾರವಲ್ಲ ಎಂದು ಶಿಕ್ಷಣಾಧಿಕಾರಿ ಹೇಳಿದ್ದಾರೆ. ವೃತ್ತಿಪರತೆ, ಶಿಕ್ಷಕರ ಮೌಲ್ಯ ಎಲ್ಲವೂ ಈ ಪ್ರಕರಣದಿಂದ ಕ್ಷೀಣಿಸುತ್ತದೆ. ಇದು ಯಾರಿಗೂ ಮಾದರಿಯಾಗಬಾರದು. ಹೀಗಾಗಿ ಕ್ರಮ ಅಗತ್ಯ ಎಂದಿದ್ದಾರೆ.
ಉತ್ತರ ಪ್ರದೇಶ ಶಿಕ್ಷಣ ಸಚಿವಾಲಯ, ಎಲ್ಲಾ ಶಾಲೆಗಳಲ್ಲಿ ರಾಷ್ಟ್ರಗೀತೆ, ವಂದೇ ಮಾತರಂ ಕಡ್ಡಾಯ ಮಾಡಲಾಗಿದೆ. ಈ ಕುರಿತು ಆದೇಶ ಹೊರಡಿಸಿದ್ದಾರೆ.

