Friday, November 14, 2025

ಭಕ್ತಿಗೆ ಬೆಲೆ ಕಟ್ಟಲುಂಟೇ? ಮಹದೇಶ್ವರನ ಪಾದಕ್ಕೆ 43 ಗ್ರಾಂ ಚಿನ್ನ, ಕೋಟಿ ಕೋಟಿ ನಗದು ಸಮರ್ಪಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಮಲೆ ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ಕಳೆದ 27 ದಿನಗಳಲ್ಲಿ ದಾಖಲೆಯ ಕಾಣಿಕೆ ಸಂಗ್ರಹವಾಗಿದೆ. ಭಕ್ತರು ಮಹದೇಶ್ವರನಿಗೆ ಒಟ್ಟು ₹2.70 ಕೋಟಿ ಮೊತ್ತದ ನಗದನ್ನು ಸಮರ್ಪಿಸಿದ್ದಾರೆ.

ನಗದು ಹಣದ ಜೊತೆಗೆ, ಭಕ್ತರು 43 ಗ್ರಾಂ ಚಿನ್ನ ಮತ್ತು 1 ಕೆ.ಜಿ. 600 ಗ್ರಾಂ ಬೆಳ್ಳಿಯನ್ನೂ ಸಹ ಕಾಣಿಕೆಯಾಗಿ ಅರ್ಪಿಸಿದ್ದಾರೆ. ಹುಂಡಿ ಎಣಿಕೆ ಕಾರ್ಯದ ವೇಳೆ, ರದ್ದುಗೊಂಡಿರುವ ₹2,000 ಮುಖಬೆಲೆಯ ಹತ್ತು ನೋಟುಗಳು ಸಹ ಪತ್ತೆಯಾಗಿವೆ. ಮಲೆ ಮಹದೇಶ್ವರನ ಮೇಲಿನ ಭಕ್ತರ ಅಚಲ ವಿಶ್ವಾಸಕ್ಕೆ ಈ ಬೃಹತ್ ಕಾಣಿಕೆ ಮೊತ್ತವು ಸಾಕ್ಷಿಯಾಗಿದೆ.

error: Content is protected !!